ಬಾಳೆಹಣ್ಣು ಎಂದರೆ ಆರೋಗ್ಯದ ಸ್ನೇಹಿತ ಎಂಬ ಭಾವನೆ ಬಹುತೇಕ ಎಲ್ಲರಲ್ಲೂ ಇದೆ. ಶಕ್ತಿ ನೀಡುತ್ತದೆ, ಹಸಿವನ್ನು ಕಡಿಮೆ ಮಾಡುತ್ತದೆ ಎಂಬ ಕಾರಣಕ್ಕೆ ಕೆಲವರು ದಿನಕ್ಕೆ ಎರಡು–ಮೂರು ಅಲ್ಲ, ನಾಲ್ಕು–ಐದು ಬಾಳೆಹಣ್ಣುಗಳನ್ನು ಕೂಡ ತಿನ್ನುವ ಅಭ್ಯಾಸ ಹೊಂದಿರುತ್ತಾರೆ. ಆದರೆ ಯಾವ ಆಹಾರವಾದರೂ ಮಿತಿಯಲ್ಲಿ ಇದ್ದಾಗ ಮಾತ್ರ ದೇಹಕ್ಕೆ ಒಳಿತು. ಹೆಚ್ಚು ಎಂದರೆ ಉತ್ತಮ ಎನ್ನುವ ಭ್ರಮೆ ಬಾಳೆಹಣ್ಣಿನ ವಿಚಾರದಲ್ಲಿ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು. ಅತಿಯಾಗಿ ಬಾಳೆಹಣ್ಣು ಸೇವಿಸಿದಾಗ ದೇಹದಲ್ಲಿ ಆಗುವ ಬದಲಾವಣೆಗಳನ್ನು ತಿಳಿದರೆ ಜಾಗರೂಕರಾಗಬಹುದು.
- ತೂಕ ಹೆಚ್ಚಾಗುವ ಸಾಧ್ಯತೆ: ಬಾಳೆಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ ಮತ್ತು ಕ್ಯಾಲೊರಿಗಳು ಹೆಚ್ಚು. ಅತಿಯಾದ ಸೇವನೆಯಿಂದ ಕೊಬ್ಬು ಹೆಚ್ಚಾಗಿ ತೂಕ ಜಾಸ್ತಿಯಾಗಬಹುದು.
- ಜೀರ್ಣಕ್ರಿಯೆ ಸಮಸ್ಯೆಗಳು: ಹೆಚ್ಚು ಬಾಳೆಹಣ್ಣು ತಿಂದರೆ ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಹಾಗೂ ಮಲಬದ್ಧತೆ ಉಂಟಾಗುವ ಸಾಧ್ಯತೆ ಇದೆ.
- ಪೊಟ್ಯಾಸಿಯಮ್ ಅಸಮತೋಲನ: ಅತಿಯಾಗಿ ಪೊಟ್ಯಾಸಿಯಮ್ ದೇಹಕ್ಕೆ ಸೇರಿದರೆ ಹೃದಯ ಬಡಿತ ಅಸಾಮಾನ್ಯವಾಗುವುದು, ದಣಿವು ಹಾಗೂ ವಾಕರಿಕೆ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
- ರಕ್ತದ ಸಕ್ಕರೆ ಮಟ್ಟ ಏರಿಕೆ: ಮಧುಮೇಹ ಇರುವವರಿಗೆ ಹೆಚ್ಚು ಬಾಳೆಹಣ್ಣು ಸೇವನೆ ರಕ್ತದಲ್ಲಿನ ಶುಗರ್ ಮಟ್ಟವನ್ನು ಹಠಾತ್ ಹೆಚ್ಚಿಸಬಹುದು.
- ತಲೆನೋವು ಮತ್ತು ನಿದ್ರಾವಸ್ಥೆ: ಕೆಲವರಿಗೆ ಅತಿಯಾದ ಬಾಳೆಹಣ್ಣು ಸೇವನೆಯಿಂದ ತಲೆನೋವು ಹಾಗೂ ಆಲಸ್ಯ ಹೆಚ್ಚಾಗುತ್ತದೆ.

