Sunday, January 11, 2026

ಬೆಂಗಳೂರಿಗರೇ ಎಚ್ಚರ! ರಸ್ತೆಬದಿ ಪಾರ್ಕಿಂಗ್ ಇನ್ಮುಂದೆ ಫ್ರೀ ಅಲ್ಲ: GBAನಿಂದ ‘ಪೇ ಆಂಡ್ ಪಾರ್ಕ್’ ಶಾಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಗರದ ರಸ್ತೆಬದಿಗಳಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿ ಟ್ರಾಫಿಕ್ ಕಿರಿಕಿರಿ ಉಂಟುಮಾಡುವವರಿಗೆ ಜಿಬಿಎ ಬಿಸಿ ಮುಟ್ಟಿಸಿದೆ. ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಇನ್ಮುಂದೆ ವಾಹನ ನಿಲ್ಲಿಸಲು ಹಣ ಪಾವತಿಸುವುದನ್ನು ಕಡ್ಡಾಯಗೊಳಿಸಿ ‘ಪೇ ಆಂಡ್ ಪಾರ್ಕಿಂಗ್’ ನಿಯಮವನ್ನು ಜಾರಿಗೆ ತರಲು ಸಜ್ಜಾಗಿದೆ.

ಈ ಹೊಸ ವ್ಯವಸ್ಥೆಯ ನಿರ್ವಹಣೆಗಾಗಿ ನಾಳೆ ಅಂದರೆ ಶನಿವಾರ (ಜನವರಿ 10) ಟೆಂಡರ್ ಕರೆಯಲಾಗಿದೆ ಎಂದು ಜಿಬಿಎ ಕಮೀಷನರ್ ಮಾಹಿತಿ ನೀಡಿದ್ದಾರೆ. ಈಗಾಗಲೇ ಬೆಂಗಳೂರು ಸೆಂಟ್ರಲ್ ಪಾಲಿಕೆ ವ್ಯಾಪ್ತಿಯಲ್ಲಿ ಟೆಂಡರ್ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಈ ನಿಯಮ ಕಾರ್ಯರೂಪಕ್ಕೆ ಬರಲಿದೆ.

ಯಾವ ರಸ್ತೆಗಳಲ್ಲಿ ಅನ್ವಯ?

ಕಮರ್ಷಿಯಲ್ ಸ್ಟ್ರೀಟ್

ಡಿಕೆನ್ಸನ್ ರೋಡ್

ಮಿಲ್ಲರ್ಸ್ ರೋಡ್ ಸೇರಿದಂತೆ ಹಲವು ಪ್ರಮುಖ ರಸ್ತೆಗಳಲ್ಲಿ ಈಗಾಗಲೇ ಪಾರ್ಕಿಂಗ್ ಸ್ಥಳಗಳನ್ನು ಗುರುತಿಸಲಾಗಿದೆ.

ವಾಹನ ಸವಾರರು ಗಂಟೆಯ ಆಧಾರದ ಮೇಲೆ ಹಣ ಪಾವತಿಸಬೇಕಾಗುತ್ತದೆ:

ದ್ವಿಚಕ್ರ ವಾಹನಗಳು: ಗಂಟೆಗೆ 15 ರೂ.

ನಾಲ್ಕು ಚಕ್ರದ ವಾಹನಗಳು: ಗಂಟೆಗೆ 30 ರೂ.

ನಿಯಮಿತವಾಗಿ ವಾಹನ ನಿಲ್ಲಿಸುವವರಿಗಾಗಿ ಮಾಸಿಕ ಪಾಸ್ ಸೌಲಭ್ಯವನ್ನೂ ಸಹ ಜಿಬಿಎ ನೀಡುತ್ತಿದೆ. ಈ ಕ್ರಮದಿಂದ ನಗರದ ರಸ್ತೆಗಳಲ್ಲಿ ಅನಗತ್ಯ ಪಾರ್ಕಿಂಗ್ ತಪ್ಪುವುದಲ್ಲದೆ, ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಅಧಿಕಾರಿಗಳು ಆಶಿಸಿದ್ದಾರೆ.

error: Content is protected !!