Wednesday, January 7, 2026

ಬ್ಯಾನರ್ ಗಲಾಟೆ | ಗುಂಡಿನ ದಾಳಿಗೆ ಬಲಿಯಾದ ಕಾರ್ಯಕರ್ತನ ಮನೆಗೆ ಡಿಕೆಶಿ ಭೇಟಿ

ಹೊಸದಿಗಂತ ವರದಿ ಬಳ್ಳಾರಿ:

ಬ್ಯಾನರ್ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಗುಂಡಿನ ದಾಳಿಯಲ್ಲಿ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ರೆಡ್ಡಿ ಅವರ ನಿವಾಸಕ್ಕೆ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಂಗಳವಾರ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ಘಟನೆಯಲ್ಲಿ ನಮ್ಮ ಕಾರ್ಯಕರ್ತ ರಾಜಶೇಖರ್ ರೆಡ್ಡಿ ಅವರು ಮೃತಪಟ್ಟಿರುವುದು ಅತ್ಯಂತ ದುಖಃ ತರಿಸಿದೆ. ನಿಮ್ಮ ಕುಟುಂಬದ ಜೊತೆ ನಾವಿದ್ದೇವೆ, ಪಕ್ಷವಿದೆ, ಧೈರ್ಯದಿoದಿರಿ ಎಂದು ಕುಟುಂಬದ ಸದಸ್ಯರಿಗೆ ಅಭಯ ನೀಡಿದರು.

ಇದನ್ನೂ ಓದಿ: Rasam | ಆಂಧ್ರ ಸ್ಟೈಲ್ ಟೊಮ್ಯಾಟೊ ರಸಂ ಟ್ರೈ ಮಾಡಿ! ರೆಸಿಪಿ ಇಲ್ಲಿದೆ

ಈ ವೇಳೆ ಕುಟುಂಬದ ಸದಸ್ಯರು, ಮೃತ ಪತ್ನಿ ದುಃಖವನ್ನು ತೋಡಿಕೊಂಡರು. ರಾಜಶೇಖರ್ ತಾಯಿ ಅವರು ಕಿರಿಯ ಪುತ್ರನಿಗೆ ನೌಕರಿ ಕೊಡಿಸಿ ಪುಣ್ಯಕಟ್ಟಿಕೊಳ್ಳಿ ಸರ್, ಜೊತೆಗೆ ವಾಸಿಸಲು ಮನೆ ನಿರ್ಮಾಣ ಮಾಡಿಕೊಡಿ ಎಂದು ಮನವಿ ಮಾಡಿದರು. ನಿಮ್ಮ ಜೊತೆ ನಾವಿದ್ದೇವೆ ಚಿಂತೆ ಬೇಡ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುಬಾರಿ ಸಚಿವ ಜಮೀರ್ ಅಹ್ಮದ್ ಖಾನ್, ರಾಜ್ಯ ಸಭಾ ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್, ಸoಸದ ಈ.ತುಕಾರಾಂ, ಮಾಜಿ ಸಚಿವ, ಶಾಸಕ ಬಿ.ನಾಗೇಂದ್ರ, ನಗರ ಶಾಸಕ ನಾರಾ ಭರತ್ ರೆಡ್ಡಿ, ಕಂಪ್ಲಿ ಶಾಸಕ ಜೆ.ಎನ್.ಗಣೇಶ್, ಸಿರುಗುಪ್ಪ ಶಾಸಕ ಬಿ.ಎಂ.ನಾಗರಾಜ್, ಸಂಡೂರು ಶಾಸಕಿ ಅನ್ನಪೂರ್ಣ ತುಕಾರಾಂ, ಸ್ಥಳೀಯ ಪಾಲಿಕೆ ಸದಸ್ಯ ವಿವೇಕ್, (ವಿಕ್ಕಿ), ಬುಡಾ ಅಧ್ಯಕ್ಷ ಜೆ.ಎಸ್.ಆಂಜನೇಯಲು, ಸೇರಿದಂತೆ ಇತರರಿದ್ದರು.

error: Content is protected !!