January20, 2026
Tuesday, January 20, 2026
spot_img

BCB ಬೇಡಿಕೆ ಮುಗಿತಾನೇ ಇಲ್ಲ: ‘ಗ್ರೂಪ್ ಸ್ವಾಪ್ ಮಾಡಿ’ ಅಂತ ICCಗೆ ಮತ್ತೆ ಮನವಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ20 ವಿಶ್ವಕಪ್ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದರೂ ಬಾಂಗ್ಲಾದೇಶ ತಂಡದ ಭಾಗವಹಿಸುವಿಕೆ ಇನ್ನೂ ಸ್ಪಷ್ಟವಾಗಿಲ್ಲ. ಪಂದ್ಯಗಳ ಆಯೋಜನೆಗೆ ಸಂಬಂಧಿಸಿದಂತೆ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ (BCB) ಮತ್ತು ಐಸಿಸಿ ನಡುವಿನ ಭಿನ್ನಾಭಿಪ್ರಾಯ ಇದೀಗ ಹೊಸ ತಿರುವು ಪಡೆದುಕೊಂಡಿದೆ.

ಈ ಹಿಂದೆ ಭಾರತದಲ್ಲಿ ನಿಗದಿಯಾಗಿದ್ದ ತನ್ನ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಬಿಸಿಬಿ ಮನವಿ ಮಾಡಿತ್ತು. ಆದರೆ ಐಸಿಸಿ ಆ ಬೇಡಿಕೆಯನ್ನು ತಿರಸ್ಕರಿಸಿತ್ತು. ಇದೀಗ ಬಾಂಗ್ಲಾದೇಶ್ ಮತ್ತೊಂದು ಮಾರ್ಗವನ್ನು ಮುಂದಿಟ್ಟು, ಟೂರ್ನಿಯ ಗ್ರೂಪ್ ವಿನ್ಯಾಸವನ್ನೇ ಬದಲಿಸುವಂತೆ ಐಸಿಸಿಗೆ ಪ್ರಸ್ತಾವನೆ ಸಲ್ಲಿಸಿದೆ.

ಪ್ರಸ್ತುತ ವೇಳಾಪಟ್ಟಿಯಂತೆ ಐರ್ಲೆಂಡ್ ತಂಡ ಗ್ರೂಪ್–2ರಲ್ಲಿ ಇದ್ದು ತನ್ನ ಎಲ್ಲಾ ಲೀಗ್ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ. ಇತ್ತ ಬಾಂಗ್ಲಾದೇಶ್ ಗ್ರೂಪ್–3ರಲ್ಲಿ ಇದ್ದು, ಭಾರತದಲ್ಲಿ ಪಂದ್ಯಗಳನ್ನಾಡಬೇಕಾಗಿದೆ. ಈ ಕಾರಣದಿಂದ, ಬಾಂಗ್ಲಾದೇಶ್ ತಂಡವನ್ನು ಗ್ರೂಪ್–2ಕ್ಕೆ ಸೇರಿಸಿ, ಐರ್ಲೆಂಡ್ ತಂಡವನ್ನು ಗ್ರೂಪ್–3ಕ್ಕೆ ಸ್ಥಳಾಂತರಿಸುವಂತೆ ಬಿಸಿಬಿ ಮನವಿ ಮಾಡಿದೆ.

ಈ ಬದಲಾವಣೆ ಆದರೆ ಬಾಂಗ್ಲಾದೇಶ್ ತನ್ನ ಲೀಗ್ ಹಂತದ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲೇ ಆಡಲು ಅವಕಾಶ ಸಿಗಲಿದೆ. ಇದೇ ಕಾರಣಕ್ಕೆ ಗ್ರೂಪ್ ಸ್ವಾಪ್ ಪ್ರಸ್ತಾವನೆ ಮುಂದಿಟ್ಟಿರುವುದಾಗಿ ತಿಳಿದುಬಂದಿದೆ.

Must Read