ಚಳಿಗಾಲದ ತಂಪು ಗಾಳಿ ಆರೋಗ್ಯವಂತರಿಗೇ ನಡುಕ ಹುಟ್ಟಿಸುತ್ತದೆ. ಇನ್ನು ಥೈರಾಯ್ಡ್ ಸಮಸ್ಯೆ ಇರುವವರಿಗಂತೂ ಈ ಕಾಲ ಸವಾಲಿನ ಹಾದಿ. ಶೀತ ಹೆಚ್ಚಾದಂತೆ ದೇಹದಲ್ಲಿ ಆಲಸ್ಯ, ವಿಪರೀತ ಆಯಾಸ ಮತ್ತು ತೂಕ ಏರಿಕೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ಸಮಯದಲ್ಲಿ ಕೇವಲ ಮಾತ್ರೆ ನುಂಗಿದರೆ ಸಾಲದು, ನಾವು ಸೇವಿಸುವ ಆಹಾರದ ಮೇಲೂ ನಿಗಾ ಇಡುವುದು ಅತಿ ಮುಖ್ಯ.
ಜಂಕ್ ಫುಡ್ ಹಾಗೂ ಎಣ್ಣೆ ಪದಾರ್ಥ: ಹೊರಗಿನ ಮಸಾಲೆಯುಕ್ತ ಮತ್ತು ಹುರಿದ ಆಹಾರಗಳು ತೂಕ ಹೆಚ್ಚಳಕ್ಕೆ ನೇರ ಕಾರಣವಾಗುತ್ತವೆ.
ಸೋಯಾ ಉತ್ಪನ್ನಗಳು: ಅತಿಯಾದ ಸೋಯಾ ಸೇವನೆಯು ಹಾರ್ಮೋನುಗಳ ಸಮತೋಲನವನ್ನು ಏರುಪೇರು ಮಾಡಬಹುದು.
ಹಸಿ ತರಕಾರಿಗಳು: ಎಲೆಕೋಸು, ಹೂಕೋಸು ಮತ್ತು ಬ್ರೊಕೊಲಿಯನ್ನು ಹಸಿಯಾಗಿ ತಿನ್ನಬೇಡಿ. ಇವು ಥೈರಾಯ್ಡ್ ಗ್ರಂಥಿಯ ಕಾರ್ಯಕ್ಕೆ ಅಡ್ಡಿಪಡಿಸಬಹುದು.
ಸಿಹಿ ಮತ್ತು ಬೇಕರಿ ತಿಂಡಿ: ಸಂಸ್ಕರಿಸಿದ ಹಿಟ್ಟು ಮತ್ತು ಸಕ್ಕರೆ ಅಂಶವಿರುವ ಪದಾರ್ಥಗಳು ಔಷಧಿಗಳ ಪ್ರಭಾವವನ್ನು ತಗ್ಗಿಸುತ್ತವೆ.
ಕೆಫೀನ್ ಅಂಶ: ಚಳಿಗಾಲದಲ್ಲಿ ಪದೇ ಪದೇ ಕಾಫಿ ಅಥವಾ ಟೀ ಕುಡಿಯುವ ಅಭ್ಯಾಸ ನಿಮಗಿದ್ದರೆ ಎಚ್ಚರ, ಇದು ಆರೋಗ್ಯಕ್ಕೆ ಪೂರಕವಲ್ಲ.
ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ಮತ್ತು ಥೈರಾಯ್ಡ್ ನಿಯಂತ್ರಣದಲ್ಲಿಡಲು ಈ ಆಹಾರಗಳು ಉತ್ತಮ:
ಬೆಚ್ಚಗಿನ ಡೈರಿ ಉತ್ಪನ್ನಗಳು: ಮಿತ ಪ್ರಮಾಣದಲ್ಲಿ ಬಿಸಿ ಹಾಲು, ಮೊಸರು ಮತ್ತು ಚೀಸ್ ಸೇವನೆಯಿಂದ ದೇಹಕ್ಕೆ ಶಕ್ತಿ ಸಿಗುತ್ತದೆ.
ಒಣ ಹಣ್ಣುಗಳು: ಬಾದಾಮಿ, ವಾಲ್ನಟ್ಸ್ ಹಾಗೂ ಅಗಸೆಬೀಜಗಳು ದೇಹಕ್ಕೆ ಅಗತ್ಯವಾದ ಒಮೆಗಾ-3 ಮತ್ತು ಪೋಷಕಾಂಶಗಳನ್ನು ನೀಡುತ್ತವೆ.
ಸೀಸನಲ್ ಹಣ್ಣು-ತರಕಾರಿ: ಆಯಾ ಕಾಲಕ್ಕೆ ಸಿಗುವ ತಾಜಾ ಹಣ್ಣುಗಳು ಹಾಗೂ ಹಸಿರು ತರಕಾರಿಗಳನ್ನು ಬೇಯಿಸಿ ಸೇವಿಸಿ.
ಪ್ರೋಟೀನ್ ಯುಕ್ತ ಆಹಾರ: ಧಾನ್ಯಗಳು ಮತ್ತು ಪ್ರೋಟೀನ್ ಸಮೃದ್ಧ ಆಹಾರಗಳು ನಿಮ್ಮನ್ನು ದಿನವಿಡೀ ಸಕ್ರಿಯವಾಗಿರಿಸಲು ಸಹಾಯ ಮಾಡುತ್ತವೆ.

