March 25, 2026
Wednesday, March 25, 2026
spot_img

ಅಮಿತ್ ಶಾ ಕುರಿತು ಮಾತಾಡುವಾಗ ಎಚ್ಚರಿಕೆ ಇರಲಿ: ಪ್ರಿಯಾಂಕ್ ಖರ್ಗೆಗೆ ಆರ್‌. ಅಶೋಕ್‌ ವಾರ್ನಿಂಗ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಿಪಕ್ಷ ನಾಯಕ ಅಶೋಕ್ ಗರಂ ಆಗಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಬಗ್ಗೆ ಮಾತಾಡುವಾಗ ಎಚ್ಚರಿಕೆಯಿಂದ ಮಾತಾಡಲಿ ಎಂದು ತಿಳಿಸಿದ್ದಾರೆ.

ದೆಹಲಿ ಸ್ಪೋಟ ಮತ್ತು ಅಮಿತ್ ಶಾ ಕುರಿತು ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ದೆಹಲಿ ಬಾಂಬ್ ಸ್ಪೋಟ ವಿಚಾರದಲ್ಲಿ ಮೋದಿ ಅವರು ಸಭೆ ಮಾಡಿದ್ದಾರೆ. ಯಾರೇ ಉಗ್ರರು ಇದ್ದರೂ ಹೆಡೆಮುರಿ ಕಟ್ಟೋಕೆ ಸೂಚನೆ ನೀಡಿದ್ದಾರೆ. ಈಗಾಗಲೇ ಯಾರು ಇದ್ದಾರೆ ಅವರ ಮೇಲೆ ಈಗಾಗಲೇ ಕ್ರಮ ತೆಗೆದುಕೊಳ್ತಿದ್ದಾರೆ ಎಂದರು.

ಆದ್ರೆ ಇತ್ತ ಪ್ರಿಯಾಂಕ್ ಖರ್ಗೆ ಕೇಂದ್ರ ಹೋಂ ಮಿನಿಸ್ಟರ್ ಅವರನ್ನ ದುರ್ಬಲ ಅಂತಾರೆ. ಮರಿ ಖರ್ಗೆ ಅವರೇ ಮಲ್ಲಿಕಾರ್ಜುನ ಖರ್ಗೆ ಅವರು ಗೃಹ ಸಚಿವರು ಆಗಿದ್ದಾಗ ಕಂಬಾಲ ಪಲ್ಲಿಯಲ್ಲಿ ದಲಿತರನ್ನ ಸಜೀವ ದಹನ ಮಾಡಿದ್ರು. ಆ ಕೇಸ್ ಏನಾಯ್ತು? ಅಪರಾಧ ಮಾಡಿದ ಎಲ್ಲರೂ ನಿರಪರಾಧಿ ಅಂತ ಆಯ್ತು. ಅಂದು ಗೃಹ ಸಚಿವರಾಗಿದ್ದು ನಿಮ್ಮ ತಂದೆ. ಆವತ್ತು ಹೋಂ ಮಿನಿಸ್ಟರ್ ಆಗಿ ಫೇಲ್ ಆದ್ರು. ನೀವು ಅಮಿತ್ ಶಾ ಬಗ್ಗೆ ಮಾತಾಡೋದಾ? ಅಮಿತ್ ಶಾ ಉಗ್ರರಿಗೆ ಗುಂಡು ಹೊಡೆಯೋ ಕೆಲಸ ಮಾಡ್ತಿದ್ದಾರೆ. ನೀವು ಏನು ಮಾಡಿದ್ರಿ? ಅವರ ಪರ ಮಾತಾಡೋ ಕೆಲಸ ಮಾಡಿದ್ರಿ. ಅಮಿತ್ ಶಾ ಅವರ ಬಗ್ಗೆ ಮಾತಾಡೋ ಬಗ್ಗೆ ಎಚ್ಚರವಾಗಿ ಪ್ರಿಯಾಂಕ್ ಖರ್ಗೆ ಮಾತಾಡಲಿ ಅಂತ ಎಚ್ಚರಿಕೆ ನೀಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !