Friday, September 12, 2025

Beauty Tips | ಕಿತ್ತಳೆ ಹಣ್ಣಿನ ಸಿಪ್ಪೆಯ ಪುಡಿಯನ್ನು ಈ ರೀತಿ ಮುಖಕ್ಕೆ ಹಚ್ಚಿ! ಆಮೇಲೆ ನೋಡಿ ಮ್ಯಾಜಿಕ್

ಸಾಮಾನ್ಯವಾಗಿ ನಾವು ಕಿತ್ತಳೆ ಹಣ್ಣನ್ನು ತಿಂದು ಅದರ ಸಿಪ್ಪೆಯನ್ನು ಬಿಸಾಡುತ್ತೇವೆ. ಆದರೆ, ಕಿತ್ತಳೆ ಸಿಪ್ಪೆಯಲ್ಲಿ ಅಡಗಿರುವ ಸೌಂದರ್ಯ ಗುಣಗಳನ್ನು ತಿಳಿದುಕೊಂಡರೆ, ಅದನ್ನು ಖಂಡಿತ ಬಿಸಾಡೋಕೆ ಹೋಗೋದಿಲ್ಲ. ವಿಟಮಿನ್ ಸಿ, ಆಂಟಿಆಕ್ಸಿಡೆಂಟ್‌ಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಕಿತ್ತಳೆ ಸಿಪ್ಪೆಗಳು ಚರ್ಮವನ್ನು ಕಾಂತಿಯುತವಾಗಿಸಲು, ಶುದ್ಧಗೊಳಿಸಲು ಮತ್ತು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತವೆ.

ಕಿತ್ತಳೆ ಸಿಪ್ಪೆಯಲ್ಲಿ ವಿಟಮಿನ್ ಸಿ ಯ ಜೊತೆಗೆ ಕ್ಯಾಲ್ಸಿಯಂ, ಪೊಟ್ಯಾಸಿಯಂ, ಮೆಗ್ನೀಸಿಯಮ್‌ಗಳಂತಹ ಪೋಷಕಾಂಶಗಳು ಇವೆ. ಇವು ಚರ್ಮಕ್ಕೆ ಹೊಳಪು ನೀಡುವುದಲ್ಲದೆ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಿ ಹೊಸ ಚರ್ಮ ಬೆಳೆಯಲು ಸಹಾಯ ಮಾಡುತ್ತವೆ.

ನೈಸರ್ಗಿಕ ಹೊಳಪು ಹೆಚ್ಚಿಸುವುದು
ಕಿತ್ತಳೆ ಸಿಪ್ಪೆ ಒಣಗಿಸಿ ಪುಡಿ ಮಾಡಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿದರೆ, ರಾಸಾಯನಿಕ ಕ್ರೀಮ್‌ಗಳಿಗಿಂತ ಹೆಚ್ಚು ನೈಸರ್ಗಿಕ ಹೊಳಪು ನೀಡುತ್ತದೆ. ವಾರಕ್ಕೆ 2–3 ಬಾರಿ ಬಳಸಿದರೆ ಚರ್ಮವು ಪ್ರಕಾಶಮಾನವಾಗುತ್ತದೆ.

ಮೊಡವೆ ನಿವಾರಣೆ
ಸಿಪ್ಪೆಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್ ಗುಣಗಳು ಮೊಡವೆ ಸಮಸ್ಯೆಯನ್ನು ಕಡಿಮೆ ಮಾಡುತ್ತವೆ. ಇದು ಚರ್ಮದ ಮೇಲೆ ಸತ್ತ ಕೋಶಗಳಿಂದಾಗುವ ಹಾನಿಯನ್ನು ತಡೆಯುತ್ತದೆ ಮತ್ತು ಮುಖವನ್ನು ಶುದ್ಧವಾಗಿರಿಸುತ್ತದೆ.

ರಂಧ್ರ ಶುದ್ಧೀಕರಣ ಮತ್ತು ಸ್ಕ್ರಬ್
ಸಿಪ್ಪೆ ಪುಡಿಯನ್ನು ರೋಸ್‌ ವಾಟರ್ ಅಥವಾ ಅಕ್ಕಿ ಹಿಟ್ಟು ಸೇರಿಸಿ ಸ್ಕ್ರಬ್ ಮಾಡಿದರೆ, ಮುಚ್ಚಿಹೋಗಿರುವ ರಂಧ್ರಗಳು ಶುದ್ಧವಾಗುತ್ತವೆ. ಇದು ಚರ್ಮದ ಸ್ಥಿತಿಸ್ಥಾಪಕತೆಯನ್ನು ಹೆಚ್ಚಿಸಿ ಚರ್ಮವನ್ನು ಮೃದುವಾಗಿಸುತ್ತದೆ.

ಫೇಸ್ ಮಾಸ್ಕ್ ಬಳಕೆ
ಕಿತ್ತಳೆ ಸಿಪ್ಪೆ ಪುಡಿಯನ್ನು ಮುಲ್ತಾನಿ ಮಿಟ್ಟಿ ಜೊತೆಗೆ ಬೆರೆಸಿ ಫೇಸ್ ಮಾಸ್ಕ್ ಮಾಡಿದರೆ, ಟ್ಯಾನಿಂಗ್ ಕಡಿಮೆಯಾಗುತ್ತದೆ ಮತ್ತು ಕಲೆಗಳು ಮಾಯವಾಗುತ್ತವೆ. ಇದು ಚರ್ಮಕ್ಕೆ ಹೊಸತನ ನೀಡುತ್ತದೆ.

ಇದನ್ನೂ ಓದಿ