Wednesday, October 22, 2025

Beauty Tips |ಕ್ಲಿಯರ್ ಸ್ಕಿನ್ ಬೇಕಾದ್ರೆ ಇವತ್ತಿನಿಂದ್ಲೇ ಈರುಳ್ಳಿ ರಸ ಮುಖಕ್ಕೆ ಹಚ್ಚೋಕೆ ಶುರು ಮಾಡಿ!

ಸುಂದರ ಮತ್ತು ಆರೋಗ್ಯಕರ ತ್ವಚೆಯನ್ನು ಪಡೆಯಲು ದುಬಾರಿ ಕಾಸ್ಮೆಟಿಕ್ ಉತ್ಪನ್ನಗಳ ಅವಶ್ಯಕತೆ ಇಲ್ಲ. ನಿಮ್ಮ ಅಡುಗೆ ಮನೆಯಲ್ಲಿ ಸುಲಭವಾಗಿ ದೊರೆಯುವ ಈರುಳ್ಳಿ ಬಳಸಿ, ಮುಖದ ಚರ್ಮದ ಸಮಸ್ಯೆಗಳನ್ನು ನೈಸರ್ಗಿಕವಾಗಿ ಪರಿಹರಿಸಬಹುದು. ಧೂಳು, ಮಾಲಿನ್ಯ ಮತ್ತು ಒತ್ತಡಭರಿತ ಜೀವನ ಶೈಲಿಯ ಪರಿಣಾಮವಾಗಿ ಮುಖದಲ್ಲಿ ಮೊಡವೆ, ಕಲೆಗಳು ಮತ್ತು ಸುಕ್ಕು ಮೂಡೋದು ಸಾಮಾನ್ಯ ಸಮಸ್ಯೆ. ಆದರೆ ಈರುಳ್ಳಿಯ ರಸವು ಇವುಗಳಲ್ಲಿಯೇ ಸಹಾಯ ಮಾಡುತ್ತದೆ.

  • ಮೊಡವೆ ಮತ್ತು ಕಲೆ ನಿವಾರಣೆ: ಈರುಳ್ಳಿ ರಸವನ್ನು ಮುಖಕ್ಕೆ ಹಚ್ಚುವುದರಿಂದ ಮೊಡವೆ, ಕಲೆಗಳು ಮತ್ತು ಕಪ್ಪು ಮಚ್ಚೆ ಕಡಿಮೆಯಾಗುತ್ತವೆ.
  • ಚರ್ಮದ ಹೊಳಪು ಹೆಚ್ಚುವುದು: ಮುಖದಲ್ಲಿ ರಕ್ತ ಸಂಚಾರ ಸುಗಮವಾಗಿ, ಹೊಸ ಚರ್ಮದ ಸೆಲ್‌ಗಳು ಸಕ್ರಿಯವಾಗುತ್ತವೆ.
  • ನೈಸರ್ಗಿಕ ಪೇಸ್‌ ಪ್ಯಾಕ್: ರಸವನ್ನು ಪೇಸ್ಟ್‌ ರೂಪದಲ್ಲಿ ಮುಖಕ್ಕೆ ಹಚ್ಚಿ 10–15 ನಿಮಿಷ ಬಿಡಿ, ನಂತರ ತಣ್ಣನೆಯ ನೀರಿನಲ್ಲಿ ತೊಳೆಯಿರಿ.
  • ಜೇನುತುಪ್ಪ ಅಥವಾ ನಿಂಬೆರಸ ಜೊತೆ ಮಿಶ್ರಣ: ಮುಖದ ಸುಕ್ಕು ಕಡಿಮೆಯಾಗುವಂತೆ ಸಹಕಾರಿಯಾಗುತ್ತದೆ ಮತ್ತು ಚರ್ಮಕ್ಕೆ ಕಾಂತಿ ನೀಡುತ್ತದೆ.
  • ಪ್ರತಿದಿನ ಅಥವಾ ವಾರಕ್ಕೆ 2-3 ಬಾರಿ ಬಳಕೆ: ನಿಯಮಿತ ಬಳಕೆ ಮುಖದ ಚರ್ಮವನ್ನು ತಾಜಾ, ಹೊಳಪಿನೊಂದಿಗೆ, ಆರೋಗ್ಯಕರವಾಗಿ ಇರಿಸಬಹುದು.
error: Content is protected !!