ಪ್ರತಿಯೊಬ್ಬ ಯುವತಿಯೂ ಸುಂದರ ಹಾಗೂ ದಪ್ಪವಾದ ರೆಪ್ಪೆಗೂದಲುಗಳನ್ನು ಬಯಸುತ್ತಾಳೆ. ಮಾರುಕಟ್ಟೆಯಲ್ಲಿ ದೊರೆಯುವ ಮಸ್ಕರಾಗಳು ತಕ್ಷಣದ ಪರಿಣಾಮ ನೀಡಿದರೂ, ಅವುಗಳಲ್ಲಿ ಇರುವ ರಾಸಾಯನಿಕಗಳು ದೀರ್ಘಾವಧಿಯಲ್ಲಿ ರೆಪ್ಪೆಗೂದಲುಗಳಿಗೆ ಹಾನಿ ಮಾಡುವ ಸಾಧ್ಯತೆ ಹೆಚ್ಚಿದೆ. ಇಂತಹ ಸಂದರ್ಭದಲ್ಲಿ ನೈಸರ್ಗಿಕ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಅತ್ಯಂತ ಸುರಕ್ಷಿತ ಆಯ್ಕೆಯಾಗಿದೆ.
ತೆಂಗಿನ ಎಣ್ಣೆಯಿಂದ ತಯಾರಿಸಿದ ಮಸ್ಕರಾ
ತೆಂಗಿನ ಎಣ್ಣೆಯಲ್ಲಿರುವ ವಿಟಮಿನ್‌ಗಳು ಮತ್ತು ಕೊಬ್ಬಿನಾಮ್ಲಗಳು ರೆಪ್ಪೆಗೂದಲುಗಳನ್ನು ಆಳವಾಗಿ ಪೋಷಿಸಿ ಬಲಪಡಿಸುತ್ತವೆ. ಇದರಿಂದ ರೆಪ್ಪೆಗೂದಲುಗಳು ಉದ್ದವಾಗಿ, ದಪ್ಪವಾಗಿ ಬೆಳೆಯುತ್ತವೆ.

ಮನೆಯಲ್ಲಿ ಬೇಕಾಗುವ ಸಾಮಾಗ್ರಿಗಳು
ಮಸ್ಕರಾ ತಯಾರಿಸಲು ಶಿಯಾ ಬೆಣ್ಣೆ, ಜೇನುಮೇಣ, ಅಲೋವೆರಾ ಜೆಲ್, ತೆಂಗಿನ ಎಣ್ಣೆ ಮತ್ತು Activated charcoal ಬೇಕಾಗುತ್ತದೆ. ಇವುಗಳನ್ನು ಮಿಶ್ರಣ ಮಾಡಿ ತಯಾರಿಸಿದ ಮಸ್ಕರಾ ರಾಸಾಯನಿಕ ಮುಕ್ತವಾಗಿದ್ದು, ರೆಪ್ಪೆಗೂದಲುಗಳ ಆರೋಗ್ಯ ಕಾಪಾಡುತ್ತದೆ.

ನಿಯಮಿತ ಬಳಕೆಯ ಪ್ರಯೋಜನ
ಈ ನೈಸರ್ಗಿಕ ಮಸ್ಕರಾವನ್ನು ನಿಯಮಿತವಾಗಿ ಬಳಿಸಿದರೆ ರೆಪ್ಪೆಗೂದಲುಗಳು ದಪ್ಪವಾಗುವುದಲ್ಲದೆ ಉದ್ದವಾಗಿಯೂ ಬೆಳೆಯುತ್ತವೆ. ತೆಂಗಿನ ಎಣ್ಣೆಯ ಜೊತೆಗೆ ಕ್ಯಾಸ್ಟರ್ ಎಣ್ಣೆಯನ್ನು ಸೇರಿಸಿದರೆ ಪರಿಣಾಮ ಇನ್ನಷ್ಟು ಉತ್ತಮವಾಗಿರುತ್ತದೆ.
ರಾತ್ರಿಯಲ್ಲಿ ಬಳಕೆ ಉತ್ತಮ
ರಾತ್ರಿ ಮಲಗುವ ಮೊದಲು ಈ ಮಸ್ಕರಾವನ್ನು ರೆಪ್ಪೆಗೂದಲುಗಳಿಗೆ ಹಚ್ಚಿ ಬೆಳಿಗ್ಗೆ ತೊಳೆಯುವುದು ಉತ್ತಮ. ವಾರಕ್ಕೆ 4–5 ಬಾರಿ ಬಳಸಿದರೆ ಕೆಲವೇ ದಿನಗಳಲ್ಲಿ ಸ್ಪಷ್ಟವಾದ ಬದಲಾವಣೆಯನ್ನು ಗಮನಿಸಬಹುದು.