ಇಂದಿನ ಮಾಲಿನ್ಯಭರಿತ ಜೀವನಶೈಲಿಯಲ್ಲಿ ತ್ವಚೆಯ ಆರೈಕೆ ಅತ್ಯಂತ ಮುಖ್ಯವಾಗಿದೆ. ದುಬಾರಿ ಬ್ಯೂಟಿ ಟ್ರೀಟ್ಮೆಂಟ್‌ಗಳು ಎಲ್ಲರಿಗೂ ಕೈಗೆಟುಕುವುದಿಲ್ಲ. ಅಂತಹ ಸಂದರ್ಭದಲ್ಲಿ, ಸರಳ ಮನೆಮದ್ದುಗಳಿಂದಲೂ ಉತ್ತಮ ಫಲಿತಾಂಶ ಪಡೆಯಬಹುದು.
ಟೊಮ್ಯಾಟೊ ಸಿಪ್ಪೆ ಚರ್ಮಕ್ಕೆ ವಿಶೇಷ ಲಾಭ ನೀಡುತ್ತದೆ. ಇದರಲ್ಲಿ ಇರುವ ಆ್ಯಂಟಿಆಕ್ಸಿಡೆಂಟ್‌ಗಳು, ವಿಟಮಿನ್ C ಹಾಗೂ ಉರಿಯೂತ ತಗ್ಗಿಸುವ ಗುಣಗಳು ಮುಖದ ಹೊಳಪು ಹೆಚ್ಚಿಸಿ, ಮೊಡವೆ ಕಡಿಮೆ ಮಾಡಲು ಸಹಾಯ ಮಾಡುತ್ತವೆ. ನಿಯಮಿತವಾಗಿ ಬಳಸಿದರೆ ಚರ್ಮದ ಮೇಲಿನ ಹೆಚ್ಚುವರಿ ಎಣ್ಣೆ ನಿಯಂತ್ರಣವಾಗುತ್ತದೆ.
ಬಳಸುವ ವಿಧಾನ:
ತಾಜಾ ಟೊಮ್ಯಾಟೊವನ್ನು ತೊಳೆಯಿರಿ, ಸಿಪ್ಪೆಯನ್ನು ನಿಧಾನವಾಗಿ ಬೇರ್ಪಡಿಸಿ. ನಂತರ ಸಿಪ್ಪೆಯ ಒಳಭಾಗವನ್ನು ನೇರವಾಗಿ ಮುಖದ ಮೇಲೆ ಉಜ್ಜಿಕೊಳ್ಳಿ. 10 ನಿಮಿಷ ಮಸಾಜ್ ಮಾಡಿದ ನಂತರ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ ಮತ್ತು ಮಾಯಿಶ್ಚರೈಸರ್ ಹಚ್ಚಿ.
ಫೇಸ್ ಪ್ಯಾಕ್ ತಯಾರಿಸುವುದು:
ಟೊಮ್ಯಾಟೊ ಸಿಪ್ಪೆಯನ್ನು ರುಬ್ಬಿ, ಅದಕ್ಕೆ ಸ್ವಲ್ಪ ಮೊಸರು ಅಥವಾ ಜೇನುತುಪ್ಪ ಸೇರಿಸಿ. 20 ನಿಮಿಷ ಹಚ್ಚಿ ನಂತರ ತೊಳೆಯಿರಿ.
ಸ್ಕ್ರಬ್ ವಿಧಾನ:
ಸಿಪ್ಪೆಯ ಒಳಗೆ ಸ್ವಲ್ಪ ಸಕ್ಕರೆ ಹಾಕಿ, ಲಘುವಾಗಿ ಮುಖದ ಮೇಲೆ ಉಜ್ಜಿಕೊಳ್ಳಿ. 15 ನಿಮಿಷದ ನಂತರ ತೊಳೆಯಿರಿ. ವಾರಕ್ಕೆ ಎರಡು ಬಾರಿ ಈ ರೀತಿ ಮಾಡಬಹುದು.
ಈ ಸರಳ ವಿಧಾನಗಳಿಂದ ದುಬಾರಿ ಚಿಕಿತ್ಸೆಗಳನ್ನು ತೆಗೆದುಕೊಳ್ಳದೆ ಸಹ ಮುಖಕ್ಕೆ ನೈಸರ್ಗಿಕ ಹೊಳಪು ನೀಡಬಹುದು.