April 3, 2026
Friday, April 3, 2026
spot_img

Belly Fat | ಸಿಟಪ್ಸ್ ಮಾಡಿದ್ರೆ ಮಾತ್ರನಾ ಹೊಟ್ಟೆ ಕೊಬ್ಬು ಕಡಿಮೆಯಾಗೋದು?

ಹೊಟ್ಟೆ ಸುತ್ತಲಿನ ಕೊಬ್ಬು ಕಡಿಮೆ ಮಾಡಬೇಕು ಅಂದಾಗ ಬಹುತೇಕ ಎಲ್ಲರೂ ಮೊದಲಿಗೆ ನೆನಪಿಸಿಕೊಳ್ಳುವುದು ಸಿಟಪ್ಸ್ ಅಥವಾ ಕ್ರಂಚ್‌ಗಳನ್ನೇ. ದಿನಕ್ಕೆ ನೂರಾರು ಸಿಟ್‌ಅಪ್ಸ್ ಮಾಡಿದರೆ ಬೆಲ್ಲಿ ಫ್ಯಾಟ್ ಬೇಗ ಕರಗುತ್ತದೆ ಎಂಬ ನಂಬಿಕೆ ಹಲವರಲ್ಲಿದೆ. ಆದರೆ ನಿಜವಾಗಿ ಹೊಟ್ಟೆ ಕೊಬ್ಬು ಕಡಿಮೆ ಆಗುವುದು ಸಿಟ್‌ಅಪ್ಸ್‌ನಿಂದ ಮಾತ್ರ ಸಾಧ್ಯವಲ್ಲ.

ಸಿಟ್‌ಅಪ್ಸ್ ಏನು ಮಾಡುತ್ತವೆ?
ಸಿಟ್‌ಅಪ್ಸ್ ಹೊಟ್ಟೆಯ ಮಸಲ್‌ಗಳನ್ನು ಬಲಪಡಿಸಲು ಸಹಾಯ ಮಾಡುತ್ತವೆ. ಅಬ್ಸ್ ಭಾಗ ಟೋನ್ ಆಗಲು ಇದು ಒಳ್ಳೆಯ ವ್ಯಾಯಾಮ. ಆದರೆ ಈ ವ್ಯಾಯಾಮ ಹೊಟ್ಟೆಯಲ್ಲಿರುವ ಕೊಬ್ಬನ್ನು ಮಾತ್ರ ಗುರಿಯಾಗಿಸಿಕೊಂಡು ಕರಗಿಸುವುದಿಲ್ಲ.

ಸ್ಪಾಟ್ ರಿಡಕ್ಷನ್ ಎಂಬುದು ಮಿಥ್
ದೇಹದ ಒಂದು ಭಾಗದ ಕೊಬ್ಬನ್ನು ಮಾತ್ರ ಕಡಿಮೆ ಮಾಡಬಹುದು ಎಂಬ ಕಲ್ಪನೆ ತಪ್ಪು. ಹೊಟ್ಟೆ ಕೊಬ್ಬು ಕಡಿಮೆ ಆಗಲು ದೇಹದ ಒಟ್ಟು ಫ್ಯಾಟ್ ಪ್ರಮಾಣ ಕಡಿಮೆಯಾಗಬೇಕು. ಅದಕ್ಕಾಗಿ ಕಾರ್ಡಿಯೊ, ವಾಕಿಂಗ್, ರನ್ನಿಂಗ್, ಸ್ಕಿಪ್ಪಿಂಗ್ ಅಥವಾ ಸೈಕ್ಲಿಂಗ್‌ ನಂತಹ ವ್ಯಾಯಾಮಗಳು ಅಗತ್ಯ.

ಇದನ್ನೂ ಓದಿ:

ಡಯಟ್ ಇಲ್ಲದೆ ಫಲಿತಾಂಶ ಕಷ್ಟ
ಹೊಟ್ಟೆ ಕೊಬ್ಬು ಕಡಿಮೆ ಮಾಡಲು ಆಹಾರ ಕ್ರಮವೇ ಮುಖ್ಯ. ಹೆಚ್ಚು ಸಕ್ಕರೆ, ಜಂಕ್ ಫುಡ್ ಮತ್ತು ತೈಲಯುಕ್ತ ಆಹಾರ ಕಡಿಮೆ ಮಾಡಿ, ಪ್ರೋಟೀನ್ ಮತ್ತು ಫೈಬರ್ ಹೆಚ್ಚಿಸಬೇಕು.

ಸರಿಯಾದ ಕಾಂಬಿನೇಷನ್
ಸಿಟಪ್ಸ್ ಜೊತೆಗೆ ಫುಲ್ ಬಾಡಿ ವರ್ಕೌಟ್, ಕಾರ್ಡಿಯೊ ಮತ್ತು ನಿಯಮಿತ ಡಯಟ್ ಇದ್ದರೆ ಮಾತ್ರ ಉತ್ತಮ ಫಲಿತಾಂಶ ಸಿಗುತ್ತದೆ. ಫಿಟ್ನೆಸ್‌ನಲ್ಲಿ ಒಂದೇ ವ್ಯಾಯಾಮವಲ್ಲ, ಒಟ್ಟಾರೆ ಜೀವನಶೈಲಿಯೇ ಮುಖ್ಯ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !