January19, 2026
Monday, January 19, 2026
spot_img

ಬೆಂಗಳೂರಿನಲ್ಲಿ ಕಾಲ್ತುಳಿತ ಪ್ರಕರಣ: ಅಭಿಮಾನಿಗಳಿಗೆ ಕೇರ್‌ ಸೆಂಟರ್‌ ತೆರೆಯಲಿದೆ ಆರ್‌ಸಿಬಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣದಿಂದ ಭಾರೀ ನೋವು ಅನುಭವಿಸಿದ್ದ ಆರ್‌ಸಿಬಿ ಆಡಳಿತ ಮಂಡಳಿ ಈಗ ಅಭಿಮಾನಿಗಳಿಗಾಗಿ ಕೇರ್‌ ಸೆಂಟರ್‌ ತೆರೆಯಲು ಮುಂದಾಗಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆರ್‌ಸಿಬಿ ಪೋಸ್ಟ್‌ ಮಾಡಿದ್ದು, ಚಿನ್ನಸ್ವಾಮಿ ಸ್ಟೇಡಿಯಂ ಒಂದು ಕಾಲದಲ್ಲಿ ಅಭಿಮಾನಿಗಳು ಹೆಚ್ಚು ಸಂಭ್ರಮದಿಂದ ಕಳೆದ ಸ್ಥಳ. ಆದರೆ ಜೂ.4ರಂದು ಸಂಭವಿಸಿದ ದುರ್ಘಟನೆಯಿಂದ ಆ ಸಂಭ್ರಮ ಮರೆಯಾಗಿದೆ. ಆ ದಿನ ನಮ್ಮ ಹೃದಯ ಚೂರಾಯಿತು. ಈ ಸಂಕಟವನ್ನು ನಾವು ಮೂರು ತಿಂಗಳ ಕಾಲ ಮೌನವಾಗಿ ಅನುಭವಿಸಿದ್ದೇವೆ. 

ಈ ದುರ್ಘಟನೆಯಿಂದ ಸಾಕಷ್ಟು ಕಲಿತಿದ್ದೇವೆ. ಇದಕ್ಕಾಗಿಯೇ ನಾವು ಅಭಿಮಾನಿಗಳ ಜೊತೆ ನಿಲ್ಲಲು ನಿರ್ಧರಿಸಿದ್ದೇವೆ. ಇದೇ ಕಾರಣಕ್ಕೆ ಅಭಿಮಾನಿಗಳಿಗಾಗಿ ಕೇರ್‌ ಸೆಂಟರ್‌ ತೆರೆಯಲು ನಿರ್ಧರಿಸಲಾಗಿದೆ. ಈ ಮೂಲಕ ಕರ್ನಾಟಕದ ಹೆಮ್ಮೆಯಾಗಿ ಮುಂದುವರಿಯುತ್ತೇವೆ.‌ ಈ ಬಗ್ಗೆ ಹೆಚ್ಚಿನ ವಿವರ ಶೀಘ್ರದಲ್ಲೇ ಹಂಚಿಕೊಳ್ಳುತ್ತೇವೆ ಎಂದು ಆರ್‌ಸಿಬಿ ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18 ವರ್ಷಗಳ ಬಳಿಕ ಐಪಿಎಲ್ ಚಾಂಪಿಯನ್ ಪಟ್ಟವನ್ನ ಮುಡಿಗೇರಿಸಿಕೊಂಡಿತ್ತು. ಆರ್‌ಸಿಬಿ ಫ್ಯಾನ್ಸ್‌ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಜೂ.4 ಸಂಭ್ರಮಾಚರಣೆಗೆ ಬಂದಿದ್ದಾಗ ಕಾಲ್ತುಳಿತ ಸಂಭವಿಸಿತ್ತು. ಈ ದುರಂತದಲ್ಲಿ 11 ಮಂದಿ ಸಾವಿಗೀಡಾಗಿದ್ದರು. ಉಚಿತ ಪ್ರವೇಶ ಘೋಷಣೆಯಿಂದ ಮಿತಿಮೀರಿದ ಜನ ಬಂದಿದ್ದರಿಂದ ಈ ಅವಘಡ ನಡೆದಿತ್ತು.

Must Read