January14, 2026
Wednesday, January 14, 2026
spot_img

ಸೈಬರ್‌ ಕಳ್ಳರಿಗೆ ಹಣ ಕೊಡೋದಕ್ಕೆ ಫ್ಲಾಟ್, 2 ನಿವೇಶನ ಮಾರಿದ ಬೆಂಗಳೂರಿನ ಟೆಕ್ಕಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರು ಮೂಲದ ಸಾಫ್ಟ್‌ವೇರ್ ವೃತ್ತಿಪರರೊಬ್ಬರು ‘ಡಿಜಿಟಲ್ ಅರೆಸ್ಟ್’ ಜಾಲಕ್ಕೆ ಸಿಕ್ಕಿಬಿದ್ದು, ತಮ್ಮ ಫ್ಲಾಟ್ ಮತ್ತು ಎರಡು ನಿವೇಶನಗಳನ್ನು ಮಾರಾಟ ಮಾಡಿರುವ ಘಟನೆ ನಡೆದಿದೆ. ವಂಚಕರು ಟೆಕ್ಕಿಯಿಂದ ಸುಮಾರು 2 ಕೋಟಿ ರೂ.ಗಳನ್ನು ದೋಚಿದ್ದಾರೆ.

ಸಂತ್ರಸ್ತೆ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ತನ್ನ 10 ವರ್ಷದ ಮಗನೊಂದಿಗೆ ವಿಜ್ಞಾನ್ ನಗರದ ಫ್ಲಾಟ್‌ವೊಂದರಲ್ಲಿ ವಾಸಿಸುತ್ತಿದ್ದಾರೆ. ಜೂನ್‌ನಲ್ಲಿ, ಕೊರಿಯರ್ ಅಧಿಕಾರಿಯಂತೆ ನಟಿಸಿದಿ ವ್ಯಕ್ತಿಯೊಬ್ಬರು ಆಕೆಗೆ ಕರೆ ಮಾಡಿ, ಆಕೆಯ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾದ ಅನುಮಾನಾಸ್ಪದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಬಳಿಕ ಆ ಕರೆಯನ್ನು ಮುಂಬೈ ಪೊಲೀಸ್ ಅಧಿಕಾರಿಗಳೆಂದು ಹೇಳಿಕೊಳ್ಳುವ ಜನರಿಗೆ ವರ್ಗಾಯಿಸಿದ್ದಾರೆ. ಅವರು ಆಕೆಯನ್ನು ಬಂಧಿಸುವುದಾಗಿ ಬೆದರಿಕೆ ಹಾಕಿದ್ದಾರೆ ಮತ್ತು ಪರಿಶೀಲನೆ ಪೂರ್ಣಗೊಳ್ಳುವವರೆಗೆ ಹೊರಗೆ ಹೋಗದಂತೆ ಸೂಚಿಸಿದ್ದಾರೆ.

ವಂಚಕರು ಆಕೆಗೆ ನಿರ್ದಿಷ್ಟ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ ಮತ್ತು ಆಕೆ ಸಹಕರಿಸದಿದ್ದರೆ, ಆಕೆಯ ಮಗ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ತನ್ನ ಮಗನ ಭವಿಷ್ಯದ ಬಗ್ಗೆ ಭಯಪಟ್ಟ ಆಕೆ, ವಂಚಕರು ನೀಡಿದ ಸೂಚನೆಗಳನ್ನು ಅನುಸರಿಸಿದ್ದಾರೆ. ಬಳಿಕ ಆಕೆ ಮಾಲೂರಿನಲ್ಲಿನಲ್ಲಿದ್ದ ಎರಡು ನಿವೇಶನಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾರೆ ಮತ್ತು ನಂತರ ತಾವು ತಂಗಿದ್ದ ವಿಜ್ಞಾನ್ ನಗರದ ಫ್ಲಾಟ್ ಅನ್ನು ಸಹ ಮಾರಿದ್ದಾರೆ.

ಆಸ್ತಿ ಮಾರಾಟದಿಂದ ಬಂದ ಹಣವನ್ನು ವಂಚಕರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಅದರೊಂದಿಗೆ ಬ್ಯಾಂಕಿನಿಂದ ಸಾಲವನ್ನು ಪಡೆದು ಅದನ್ನು ವಂಚಕರಿಗೆ ಪಾವತಿಸಿದ್ದಾರೆ. ಒಟ್ಟಾರೆಯಾಗಿ, ಬಬಿತಾ ದಾಸ್ ಎಂಬುವವರು ಸುಮಾರು 2 ಕೋಟಿ ರೂ.ಗಳನ್ನು ಕಳೆದುಕೊಂಡಿದ್ದಾರೆ.

ನಂತರ ವಂಚಕರು ಈ ಹಣವನ್ನು ಪಡೆಯಲು ಹತ್ತಿರದ ಪೊಲೀಸ್ ಠಾಣೆಗೆ ಹೋಗುವಂತೆ ಹೇಳಿ, ಹಠಾತ್ತನೆ ಕರೆಯನ್ನು ಕಡಿತಗೊಳಿಸಿದ್ದಾರೆ. ನಂತರ ಅವರ ಫೋನ್‌ಗಳು ಸ್ವಿಚ್ ಆಫ್ ಆಗಿವೆ.

ಮಹಿಳೆ ಈಗ ವೈಟ್‌ಫೀಲ್ಡ್ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಡಿಜಿಟಲ್ ಅರೆಸ್ಟ್ ಹಗರಣದ ತನಿಖೆಯನ್ನು ಪ್ರಾರಂಭಿಸಿದ್ದಾರೆ.

Most Read

error: Content is protected !!