ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಭಾರತದ ಯುವತಿ ಬೆಂಗಳೂರಿನ ಜನರ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾಳೆ. ಬೆಂಗಳೂರಿಗರ ತಲೆಯಲ್ಲಿ ಬುದ್ದಿ ಇಲ್ಲ ಎಂದು ಒಡಿಶಾ ಮೂಲದ ಯುವತಿ ನೇಹಾ ಬಿಸ್ವಾಲ್ ದುರಹಂಕಾರದ ಮಾತಗಳನ್ನು ಆಡಿದ್ದಾಳೆ.
ನೇಹಾ ಬಿಸ್ವಾಲ್ ಬೆಂಗಳೂರಿನಲ್ಲಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡು, ಪಿಜಿಯಲ್ಲಿ ವಾಸವಾಗಿದ್ದಾಳೆ.
ಸೋಶಿಯಲ್ ಮೀಡಿಯಾ ಇನ್‌ಫ್ಲ್ಯೂಯೆನ್ಸರ್ ಆಗಿರುವ ನೇಹಾ ಬಿಸ್ವಾಲ್ ಎಂಬ ಒಡಿಶಾ (Odisha) ಮೂಲದ ಯುವತಿ, ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ದಾಳೆ. ರಸ್ತೆಯಲ್ಲಿ ನಡೆದುಕೊಂಡು ಆಫೀಸ್‌ಗೆ ಹೋಗುವಾಗ, ಯಾರೋ ಒಬ್ಬ ಕಾರು ಚಾಲಕ ವೇಗವಾಗಿ ಹೋದ ಪರಿಣಾಮ ರಸ್ತೆಯಲ್ಲಿದ್ದ ನೀರು ಯುವತಿಯ ಮೇಲೆ ಎರಚಿತ್ತು. ಈ ವೇಳೆ ಈಕೆ ಬೆಂಗಳೂರು ಜನರ ಬಗ್ಗೆ ಕೆಟ್ಟದಾಗಿ ಮಾತನಾಡಿ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ.
ಯುವತಿ ನೇಹಾ ಬಿಸ್ವಾಲ್ ವಿಡಿಯೋದಲ್ಲಿ ಹೇಳಿರುವಂತೆ,’ಈಕೆ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ನನ್ನ ಪಕ್ಕದಲ್ಲೇ ಕಾರುವೊಂದು ಪಾಸ್ ಆಗಿದೆ. ಆಗ, ರಸ್ತೆ ಮೇಲೆ ನಿಂತಿದ್ದ ನೀರು ನನ್ನ ಮೈಮೇಲೆ ಹಾರಿದೆ. ಮುಖಕ್ಕೆ ಸಿಡಿದಿದೆ’ ಎಂದು ಹೇಳಿದ್ದಾಳೆ.
ಮುಂದುವರೆದು ನೇಹಾ ಬಿಸ್ವಾಲ್ ಬೆಂಗಳೂರಿಗರಿಗೆ ತಲೆಯಲ್ಲಿ ಬುದ್ದಿ ಇಲ್ಲ. ಜೋರು ಮಳೆ ಬರುತ್ತಿದ್ದರೂ, ವಾಹನವನ್ನು ಜೋರಾಗಿ ಓಡಿಸುತ್ತಾರೆ. ಬೆಂಗಳೂರಿಗರು ಅನಕ್ಷರಸ್ಥರು. ಚೂ*** ಥೂ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ.
ಕೋಪದಲ್ಲಿ ಬೆಂಗಳೂರಿನ ಬಗ್ಗೆ ನಾಲಿಗೆ ಹರಿಬಿಟ್ಟಿ ನೇಹಾ ಬಿಸ್ವಾಲ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಕನ್ನಡಿಗರು ಕಾಮೆಂಟ್ ಮೂಲಕ ನೇಹಾ ಬಿಸ್ವಾಲ್ಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.