Friday, September 5, 2025

ಧರ್ಮಸ್ಥಳ ಎಸ್ ಐಟಿ ತನಿಖೆಗೆ ‘ಭೀಮ ಬಲ’: ನೆಲ ಶೋಧಕ್ಕೆ ಬಂತು ಡ್ರೋಣ್ ಜಿಪಿಆರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಧರ್ಮಸ್ಥಳದ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ ತನಿಖೆ ಚುರುಕುಗೊಳಿಸಿದ್ದು, ನೇತ್ರಾವತಿ ನದಿಯ ದಡದಲ್ಲಿರುವ ‘ಪಾಯಿಂಟ್ ನಂ. 13’ ರಲ್ಲಿ ಭೂಮಿಯ ಆಳದಲ್ಲಿ ಹೂತಿರುವ ಶವಗಳ ಬಗ್ಗೆ ಸುಳಿವು ಪಡೆಯಲು ಡ್ರೋಣ್-ಮೌಂಟೆಡ್ GPR ತಂತ್ರಜ್ಞಾನವನ್ನು ಬಳಸಿ ಸ್ಕ್ಯಾನ್ ನಡೆಸಲು ಸಿದ್ಧತೆ ನಡೆಸಿದ್ದು, ಕಾರ್ಯಾಚರಣೆ ಆರಂಭಿಸಿದೆ.

ತನಿಖಾಧಿಕಾರಿ ಜಿತೇಂದ್ರ ದಯಾಮಾ ಅವರ ನೇತೃತ್ವದಲ್ಲಿ ಜಿಪಿಆರ್ ತಂತ್ರಜ್ಞರ ತಂಡ, ಫೊರೆನ್ಸಿಕ್ ವೈದ್ಯರು ಹಾಗೂ ಕಾರ್ಮಿಕರು ಪಾಯಿಂಟ್ ನಂ. 13ಕ್ಕೆ ಆಗಮಿಸಿದ್ದು, ಬಿಗು ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ

ಏನಿದು ಡ್ರೋಣ್ GPR ತಂತ್ರಜ್ಞಾನ?
ಸಾಮಾನ್ಯ GPR ಆಂಟೆನಾವನ್ನು ಡ್ರೋಣ್ ನ ಕೆಳಭಾಗದಲ್ಲಿ ಅಳವಡಿಸಿ, ಡ್ರೋನ್ ಗಾಳಿಯಲ್ಲಿ ಹಾರುತ್ತಾ ನೆಲದ ಮೇಲ್ಮೈಗೆ ಸಮೀಪವಾಗಿ GPR ಸಿಗ್ನಲ್‌ಗಳನ್ನು ಕಳುಹಿಸುತ್ತದೆ. ಈ ಸಿಗ್ನಲ್‌ಗಳು ನೆಲದೊಳಗೆ ಹೋಗಿ ಪ್ರತಿಫಲಿಸಿ ಮರಳಿ ಬರುತ್ತವೆ. ನಂತರ ಈ ಸಿಗ್ನಲ್‌ಗಳನ್ನು ಸೆನ್ಸರ್‌ಗಳು ದಾಖಲಿಸಿಕೊಂಡು, ಸಾಫ್ಟ್‌ವೇರ್ ಮೂಲಕ 2D ಅಥವಾ 3D ಚಿತ್ರವಾಗಿ ಪರಿವರ್ತಿಸಿ ನಿಖರವಾದ ಫಲಿತಾಂಶವನ್ನು ನೀಡುತ್ತದೆ. ಈ ತಂತ್ರಜ್ಞಾನವು ವೇಗವಾಗಿ ಮತ್ತು ದೊಡ್ಡ ಪ್ರದೇಶವನ್ನು ಪರಿಶೀಲಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ