Monday, December 1, 2025

ಸಂವಿಧಾನ ರಕ್ಷಣಾ ಸಮಿತಿಯಿಂದ ಚಿತ್ತಾಪುರದಲ್ಲಿ ಭೀಮ ನಡಿಗೆಯ ಪಥಸಂಚಲನ!

ಹೊಸ ದಿಗಂತ ವರದಿ, ಕಲಬುರಗಿ:

ಇಡೀ ರಾಷ್ಟ್ರದ ಗಮನ ಸೆಳೆದಿದ್ದ ಚಿತ್ತಾಪುರದ ಆರೆಸ್ಸೆಸ್ ಪಥಸಂಚಲನದ ಬಳಿಕ ಇದೀಗ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸ್ವಕ್ಷೇತ್ರವಾದ ಚಿತ್ತಾಪುರ ಪಟ್ಟಣದಲ್ಲಿ ಸೋಮವಾರ ಸಂವಿಧಾನ ರಕ್ಷಣಾ ಸಮಿತಿಯಿಂದ ಭೀಮ ನಡಿಗೆ ಪಥಸಂಚಲನ ನಡೆಯಿತು.

ಚಿತ್ತಾಪುರ ಪಟ್ಟಣದ ಚಿತ್ತಾವಲಿ ಸರ್ಕಲ್,ದಿಂದ ವಿವಿಧ ದಲಿತ ಸಂಘಟನೆಗಳ ನೇತೃತ್ವದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಆರಂಭವಾದ ಪಥಸಂಚಲನ,ನಾಗಾವಿ ಸರ್ಕಲ್, ಭುವನೇಶ್ವರಿ ಸರ್ಕಲ್,ಡಾ.ಬಿಆರ್ ಅಂಬೇಡ್ಕರ್ ವೃತ್ತದ ಮೂಲಕ ಬಜಾಜ್ ಕಲ್ಯಾಣ ಮಂಟಪದಲ್ಲಿ ಆಗಮಿಸಿ ,ಬಳಿಕ ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ನಡೆದ ಸಮಾರೋಪ ಸಮಾರಂಭದೊಂದಿಗೆ ಸಂಪನ್ನಗೊಂಡಿತು.

ಸಂವಿಧಾನ ರಕ್ಷಣಾ ಸಮಿತಿಯಿಂದ ನಡೆದ ಭೀಮ ನಡಿಗೆಯ ಪಥಸಂಚಲನದಲ್ಲಿ ನೀಲಿ ಹಾಗೂ ಬೀಳಿ ಸಮವಸ್ತ್ರ ಧರಿಸಿದಿ ನೂರಾರು ಮಹಿಳೆಯರು ಪಥಸಂಚಲನ ನಡೆಸಿದರು.ಪಥಸಂಚಲನದಲ್ಲಿ ಸುಮಾರು ೪೦೦ ಜನ ಮಹಿಳೆಯರು ಭಾಗಿಯಾಗಿದ್ದಲ್ಲದೇ,ಸಾರ್ವಜನಿಕರು ಸಮಾರಂಭದಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು.ಭೀಮ ನಡಿಗೆ ಪಥಸಂಚಲನದ ಹಿನ್ನೆಲೆ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಬ್ಯಾನರ್,ಬಟ್ಟಿಂಗ್,ಗಳಿಂದ ಅಲಂಕಾರ ಮಾಡಲಾಗಿತ್ತು.

error: Content is protected !!