January18, 2026
Sunday, January 18, 2026
spot_img

ದಸರಾ, ದೀಪಾವಳಿಗೆ ಮೋದಿ ಸರ್ಕಾರದಿಂದ ಬಿಗ್‌ಗಿಫ್ಟ್‌! ಯಾವುದರ ದರ ಇಳಿಕೆ??

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೇಶದ ಜನರಿಗೆ ದಸರಾ-ದೀಪಾವಳಿಗೆ ಕೇಂದ್ರ ಸರ್ಕಾರ ಭರ್ಜರಿ ಗಿಫ್ಟ್ ಕೊಟ್ಟಿದೆ. ಜನರ ಜೇಬಿಗೆ ಜಿಎಸ್‌ಟಿ ದರ ಹಾಕುತ್ತಿರೋ ಬರೆಯ ನೋವನ್ನ ಕೊಂಚ ಕಡಿಮೆ ಮಾಡಿದೆ. ದೇಶದಲ್ಲಿ ಎಲ್ಲ ಫುಡ್, ಟೆಕ್ಸ್ ಟೈಲ್ ಉತ್ಪನ್ನಗಳ ಮೇಲಿನ ಜಿಎಸ್‌ಟಿ ದರ ಇಳಿಕೆಯಾಗಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಎಸ್‌ಟಿ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. 4 ಸ್ಲ್ಯಾಬ್​ಗಳ ಬದಲು 2 ಸ್ಲ್ಯಾಬ್​​​ಗಳಲ್ಲಿ ಜಿಎಸ್​ಟಿ ಜಾರಿಗೆ ಕೇಂದ್ರ ಸರ್ಕಾರ ತೀರ್ಮಾನ ಮಾಡಿದೆ. ಶೇ.5 ಮತ್ತು ಶೇ. 18ರ ಸ್ಲ್ಯಾಬ್‌ಗಳನ್ನ ಮಾತ್ರ ಉಳಿಸಿಕೊಳ್ಳಲು ‌ಒಪ್ಪಿಗೆ ನೀಡಿದೆ. ಇದ್ರಿಂದ ದೇಶದ ಮಧ್ಯಮ ವರ್ಗದವರಿಗೆ ಭರ್ಜರಿ ಗುಡ್‌ನ್ಯೂಸ್‌ ಸಿಕ್ಕಿದೆ. 

ಯಾವ ವಸ್ತುಗಳು ಶೇ.18 ರಿಂದ 5ಕ್ಕೆ ಇಳಿಕೆ?

ಚಾಕೋಲೆಟ್​, ಕಾಫಿ, ಇನ್​ಸ್ಟಾಂಟ್​​ ನೂಡಲ್ಸ್, ಪಾಸ್ತಾ

ಬೆಣ್ಣೆ, ತುಪ್ಪ, ಸಾಸ್​, ನಮ್ಕೀನ್​, ಸಂರಕ್ಷಿತ ಮಾಂಸ

ಟೂತ್​ಬ್ರೆಷ್​, ಸೈಕಲ್, ಪಾದರಕ್ಷೆ, ಬಟ್ಟೆಗಳು

ಹೇರ್​ ಆಯಿಲ್, ಟಾಯ್ಲೆಟ್​ ಸೋಪ್, ಸೋಪುಗಳು

ಅಡುಗೆ ಸಾಮಗ್ರಿ, ಬೆಡ್​ ಶೀಟ್​, ಟೂತ್​ಪೇಸ್ಟ್​, ಮಾರ್ಬಲ್​

ಕರಕುಶಲ ವಸ್ತುಗಳು, ಚರ್ಮದ ಉತ್ಪನ್ನಗಳು, ಶಾಂಪೂ

ಕಾರ್ನ್ ಫ್ಲೇಕ್ಸ್, ಉಪ್ಪು, ಟೇಬಲ್, ಕುರ್ಚಿಗಳು 

ನವೀಕರಿಸಬಹುದಾದ ಇಂಧನ, ರಸಗೊಬ್ಬರಗಳು

ಯಾವೆಲ್ಲಾ ವಸ್ತುಗಳ ದರ ಶೇ. 28ರಿಂದ 18ಕ್ಕೆ ಇಳಿಕೆ??

ಸಿಮೆಂಟ್​, ಎಲ್ಲ ಮಾದರಿಯ ಟಿವಿ, ಎಸಿ, ಪ್ರಿಡ್ಜ್

350 ಸಿಸಿ ಒಳಗಿನ ಮೋಟಾರ್​ ಸೈಕಲ್, ಸಣ್ಣ ಕಾರುಗಳು

ಟ್ರ್ಯಾಕ್ಟರ್​, ಬಸ್​, ಟ್ರಕ್, ತ್ರಿಚಕ್ರವಾಹನ, ಆಟೋ ಬಿಡಿ ಭಾಗ

ಯಾವೆಲ್ಲಾ ವಸ್ತುಗಳಿಗೆ ಜಿಎಸ್‌ಟಿ ವಿನಾಯಿತಿ??

33 ಜೀವರಕ್ಷಕ ಔಷಧಗಳು, ಕ್ಯಾನ್ಸರ್ ಔಷಧಗಳು

ಅಪರೂಪದ ಕಾಯಿಲೆಗಳ ಔಷಧಗಳು

ವೈಯಕ್ತಿಕ ಜೀವ ವಿಮೆ, ಆರೋಗ್ಯ ಪಾಲಿಸಿಗಳು

ಮ್ಯಾಪ್‌, ಚಾರ್ಟ್‌, ಗ್ಲೋಬ್‌ಗಳು, ಪೆನ್ಸಿಲ್‌ಗಳು

ಶಾರ್ಪನರ್‌, ಕ್ರಯೋನ್‌, ನೋಟ್‌ಬುಕ್‌ಗಳು

ಪ್ಯಾಸ್ಟೆಲ್‌ಗಳು, ಎರೇಸರ್‌ಗೆ ಜಿಎಸ್‌ಟಿ ಇಲ್ಲ

ಹಾಲು, ಪನೀರ್, ಪಿಜ್ಜಾ, ಬ್ರೆಡ್, ಚಪಾತಿ, ರೋಟಿ

Must Read

error: Content is protected !!