Saturday, December 13, 2025

IPL 19 ಹರಾಜಿಗೆ ಮುನ್ನ ದೊಡ್ಡ ಸುಳಿವು: ಗ್ರೀನ್-ಲಿವಿಂಗ್‌ಸ್ಟೋನ್-ವೆಂಕಟೇಶ್‌ಗೆ ಕೋಟಿ ಕೋಟಿ ಬೆಲೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಮಿನಿ ಹರಾಜು ಪ್ರಕ್ರಿಯೆಗೆ ದಿನಗಣನೆ ಶುರುವಾಗಿದೆ. ಡಿಸೆಂಬರ್ 16 ರಂದು ಅಬುಧಾಬಿಯ ಇತಿಹಾದ್ ಅರೇನಾದಲ್ಲಿ ನಡೆಯಲಿರುವ ಈ ಹೈ-ವೋಲ್ಟೇಜ್ ಈವೆಂಟ್‌ಗೂ ಮುನ್ನ ಟೀಮ್ ಇಂಡಿಯಾದ ಹಿರಿಯ ಆಟಗಾರ ರವಿಚಂದ್ರನ್ ಅಶ್ವಿನ್ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಆಯೋಜಿಸಿದ ‘ಮೋಕ್ ಆಕ್ಷನ್’ ಭಾರಿ ಕುತೂಹಲ ಮೂಡಿಸಿದೆ. ಈ ಅಣುಕು ಪ್ರದರ್ಶನದಲ್ಲಿ ಮೂವರು ಆಟಗಾರರು ಬರೋಬ್ಬರಿ 15 ಕೋಟಿ ರೂ. ಗಿಂತಲೂ ಹೆಚ್ಚಿನ ಮೊತ್ತಕ್ಕೆ ಹರಾಜಾಗಿದ್ದು ವಿಶೇಷ!

ಆಸ್ಟ್ರೇಲಿಯಾದ ಸ್ಫೋಟಕ ಆಲ್-ರೌಂಡರ್ ಕ್ಯಾಮರೂನ್ ಗ್ರೀನ್ ಖರೀದಿಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ಪ್ರತಿನಿಧಿಗಳ ನಡುವೆ ಭರ್ಜರಿ ಪೈಪೋಟಿ ನಡೆದಿದ್ದು, ಅಂತಿಮವಾಗಿ CSK ಬರೋಬ್ಬರಿ 21 ಕೋಟಿ ವ್ಯಯಿಸಿ ಗ್ರೀನ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿತು. ಈ ಬಾರಿಯ ಹರಾಜಿನಲ್ಲಿ ಗ್ರೀನ್ ದಾಖಲೆ ಮೊತ್ತಕ್ಕೆ ಸೇಲ್ ಆಗುವ ಸುಳಿವನ್ನು ಇದು ನೀಡಿದೆ.

ಇದೇ ವೇಳೆ, ಇಂಗ್ಲೆಂಡ್‌ನ ಮತ್ತೊಬ್ಬ ಆಲ್-ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಅವರಿಗೂ ಫ್ರಾಂಚೈಸಿಗಳ ನಡುವೆ ತೀವ್ರ ಪೈಪೋಟಿ ನಡೆಯಿತು. ಅಂತಿಮವಾಗಿ, KKR 18.5 ಕೋಟಿ ನೀಡಿ ಲಿವಿಂಗ್‌ಸ್ಟೋನ್ ಅವರನ್ನು ಖರೀದಿಸಿತು. ಇನ್ನು, ಭಾರತೀಯ ಆಲ್-ರೌಂಡರ್ ವೆಂಕಟೇಶ್ ಅಯ್ಯರ್ ಮೇಲೂ ಬಿಡ್ಡಿಂಗ್ ಸುರಿಮಳೆಯಾಗಿದ್ದು, KKR 17.5 ಕೋಟಿಗೆ ವೆಂಕಟೇಶ್ ಅವರನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಯಿತು. ಈ ಅಣುಕು ಪ್ರದರ್ಶನದ ಪ್ರಕಾರ, ಈ ಮೂವರು ಆಟಗಾರರಿಗಾಗಿ ನಿಜವಾದ ಹರಾಜಿನಲ್ಲಿ ಕೋಟಿಗಳ ಸಮರ ಖಚಿತವಾಗಿದೆ.

error: Content is protected !!