Monday, December 1, 2025

BIG NEWS | ಕೆನಡಾದಲ್ಲಿ ಹಾಸ್ಯನಟ ಕಪಿಲ್ ಶರ್ಮಾ ಕೆಫೆ ಮೇಲೆ ಮತ್ತೆ ಗುಂಡಿನ ದಾಳಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೆನಡಾದಲ್ಲಿ ಹಾಸ್ಯನಟ ಕಪಿಲ್ ಶರ್ಮಾ ಕೆಫೆಯ ಮೇಲೆ ಮತ್ತೆ ಗುಂಡು ಹಾರಿಸಲಾಗಿದೆ. ಇದು ಮೂರನೇ ಬಾರಿಯಾಗಿದೆ.

ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿರುವ ಕ್ಯಾಪ್ಸ್ ಕೆಫೆ, ಹಾಸ್ಯನಟ ಕಪಿಲ್ ಶರ್ಮಾ ಮತ್ತು ಅವರ ಪತ್ನಿ ಗಿನ್ನಿ ಚತ್ರತ್ ಅವರ ಒಡೆತನದಲ್ಲಿದೆ.

ಮಾಬ್ ಬಾಸ್ ಲಾರೆನ್ಸ್ ಬಿಷ್ಣೋಯ್ ಕಾರ್ಯಾಚರಣೆಯ ಭಾಗವಾಗಿರುವ ದರೋಡೆಕೋರರಾದ ​​ಗೋಲ್ಡಿ ಧಿಲ್ಲೋನ್ ಮತ್ತು ಕುಲದೀಪ್ ಸಿಧು ಸಾಮಾಜಿಕ ಮಾಧ್ಯಮದಲ್ಲಿ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದಾರೆ.

ಕಾಪ್ಸ್ ಕೆಫೆ ಮೇಲೆ ದಾಳಿಯ ವೀಡಿಯೋ ವೈರಲ್ ಆಗಿದ್ದು, ವಾಹನದೊಳಗೆ ಕುಳಿತು ಕೆಫೆ ಮೇಲೆ ದಾಳಿ ಮಾಡಲಾಗಿದೆ. ವ್ಯಕ್ತಿಯೊಬ್ಬ ತನ್ನ ಗನ್ ಹೊರಗೆ ತೆಗದೆಉ ಕಾರಿನ ಕಿಟಕಿ ಮೂಲಕ ಹಲವು ಬಾರಿ ಗುಂಡು ಹಾರಿಸುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಧಿಲ್ಲೊನ್ ಹಾಗೂ ಸಿಧು ಇಬ್ಬರು ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದಾರೆ. ಜೊತೆಗೆ ಸಾರ್ವಜನಿಕರಿಗೆ ಈ ಹೊಟೇಲ್‌ನಿಂದ ದೂರ ಇರುವಂತೆ ಎಚ್ಚರಿಕೆ ನೀಡಿದ್ದಾರೆ. ನಾನು ಕುಲ್ದೀಪ್ ಸಿಧು ಹಾಗೂ ಗೋಲ್ಡಿ ಧಿಲ್ಲೊನ್ ಕಾಪ್ಸ್‌ ಕೆಫೆಯಲ್ಲಿ ನಡೆದ ಗುಂಡಿನ ದಾಳಿಯ ಹೊಣೆ ಹೊರುತ್ತೇವೆ. ನಮಗೆ ಸಾರ್ವಜನಿಕರ ಮೇಲೆ ಯಾವುದೇ ದ್ವೇಷ ಇಲ್ಲ ಎಂದು ಅವರು ದಾಳಿಯ ನಂತರ ಹೇಳಿದ್ದಾರೆ.

ನಮ್ಮ ಜೊತೆ ಯಾರು ವಿವಾದ ಹೊಂದಿದ್ದಾರೋ ಅವರು ನಮ್ಮಿಂದ ದೂರ ಇರಬೇಕು. ಯಾರು ಅಕ್ರಮ ಕೆಲಸದಲ್ಲಿ ತೊಡಗಿದ್ದಾರೋ ಹಾಗೂ ಜನರಿಗೆ ಹಣ ಪಾವತಿ ಮಾಡುತ್ತಿಲ್ಲವೋ ಅವರು ಸಿದ್ಧವಾಗಿರಬೇಕು ಎಂದು ಹೇಳಿದ್ದಾರೆ. ಜೊತೆಗೆ ಬಾಲಿವುಡ್‌ನಲ್ಲಿ ಯಾರು ಧರ್ಮದ ವಿರುದ್ಧ ಮಾತನಾಡುತ್ತಾರೋ ಅವರು ಕೂಡ ಸಿದ್ಧವಾಗಿರಬೇಕು. ಬುಲೆಟ್ ಯಾವ ಕಡೆಯಿಂದ ಬೇಕಾದರೂ ಬರಬಹುದು ಎಂದು ಸಂದೇಶದಲ್ಲಿ ಹೇಳಲಾಗಿದೆ.

error: Content is protected !!