ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂತಾರಾಷ್ಟ್ರೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಭಾರತಕ್ಕೆ ಆಗಮಿಸಿದ್ದು, ಇಂದು ಸಂಜೆ ಅವರು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದಾರೆ.
ದೆಹಲಿಯಲ್ಲಿರುವ ಪ್ರಧಾನ ಮಂತ್ರಿ ನಿವಾಸಕ್ಕೆ ಭೇಟಿ ನೀಡಿದ್ದ ಶುಕ್ಲಾ ಅವರನ್ನು ಪ್ರಧಾನಿ ಮೋದಿ ಅವರು ಕೈಕುಲುಕಿ ಪ್ರೀತಿಯ ಅಪ್ಪುಗೆಯೊಂದಿಗೆ ಸ್ವಾಗತ ಕೋರಿದ್ದಾರೆ.
ಶುಕ್ಲಾ ಮೋದಿಗೆ ಆಕ್ಸಿಯಮ್ -4 ಮಿಷನ್ ಪ್ಯಾಚ್ ಅನ್ನು ಉಡುಗೊರೆಯಾಗಿ ನೀಡಿದರು ಮತ್ತು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ತೆಗೆದ ಭೂಮಿಯ ಚಿತ್ರಗಳನ್ನು ತೋರಿಸಿದ್ದಾರೆ.