Tuesday, January 13, 2026
Tuesday, January 13, 2026
spot_img

BIG NEWS | ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನದ ಡ್ರೋನ್ ಪ್ರತ್ಯಕ್ಷ: ಭಾರತೀಯ ಸೇನಾಪಡೆಯಿಂದ ಗುಂಡಿನ ದಾಳಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಸೇನಾ ಮುಖ್ಯಸ್ಥಜನರಲ್ ಉಪೇಂದ್ರ ದ್ವಿವೇದಿ ಭಾರತದ ಗಡಿಯೊಳಗೆ ಪಾಕಿಸ್ತಾನದ ಡ್ರೋನ್ ಚಟುಟವಿಕೆಗಳನ್ನು ನಿಲ್ಲಿಸುವಂತೆ ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳ ನಂತರ ಮತ್ತೊಮ್ಮೆ ಜಮ್ಮು ಮತ್ತು ಕಾಶ್ಮೀರದ ರಾಜೌರಿಯ ಎಲ್‌ಒಸಿಯಲ್ಲಿ ಡ್ರೋನ್‌ಗಳು ಕಾಣಿಸಿಕೊಂಡಿವೆ. ಕಳೆದ 48 ಗಂಟೆಗಳಲ್ಲಿ ಭಾರತದ ಗಡಿಯೊಳಗೆ ಕಾಣಿಸಿಕೊಂಡ ಪಾಕಿಸ್ತಾನದ 2ನೇ ಡ್ರೋನ್ ಇದಾಗಿದೆ.

ರಾಜೌರಿ ಸೆಕ್ಟರ್‌ನ ನಿಯಂತ್ರಣ ರೇಖೆಯ ಉದ್ದಕ್ಕೂ ಇಂದು ರಾತ್ರಿ ಅನುಮಾನಾಸ್ಪದ ಡ್ರೋನ್‌ಗಳು ಕಂಡುಬಂದ ನಂತರ ಭದ್ರತಾ ಪಡೆಗಳನ್ನು ಎಚ್ಚರಿಸಲಾಯಿತು. ಕೇವಲ 48 ಗಂಟೆಗಳಲ್ಲಿ ಎರಡನೇ ಬಾರಿಗೆ ಡ್ರೋನ್‌ಗಳು ಪತ್ತೆಯಾದ ನಂತರ ಭಾರತೀಯ ಸೇನೆಯು ಬಲವಾಗಿ ಅದಕ್ಕೆ ಪ್ರತಿದಾಳಿ ನಡೆಸಿತು. ಇದರಿಂದ ಗಡಿಯಲ್ಲಿ ಹೆಚ್ಚಿನ ಎಚ್ಚರಿಕೆಯನ್ನು ವಹಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಎಲ್‌ಒಸಿಯಲ್ಲಿ ಡ್ರೋನ್‌ಗಳು ಕಾಣಿಸಿಕೊಂಡ ನಂತರ ಭಾರತೀಯ ಸೇನೆಯು ಮಾನವರಹಿತ ವೈಮಾನಿಕ ವ್ಯವಸ್ಥೆ (UAS)ಮಾಡಿರುವುದಾಗಿ ರಕ್ಷಣಾ ಮೂಲಗಳು ತಿಳಿಸಿವೆ.

ರಾತ್ರಿ 7 ಗಂಟೆ ಸುಮಾರಿಗೆ ರಜೌರಿಯ ಚಿಂಗಸ್ ಪ್ರದೇಶದಲ್ಲಿ ಪಾಕ್ ಡ್ರೋನ್ ಗಳು ಭಾರತದ ಗಡಿ ಪ್ರವೇಶಿಸಿದಾಗ ಸೇನಾಪಡೆ ಗುಂಡಿನ ದಾಳಿ ನಡೆಸಿದ್ದಾರೆ. ಬಳಿಕ ಡ್ರೋನ್‌ಗಳು ನಾಪತ್ತೆಯಾಗಿದ್ದು, ಪಾಕ್ ನತ್ತ ಹೋಗಿವೆ.

ಯಾವುದೇ ಶಸ್ತ್ರಾಸ್ತ್ರಗಳು ಅಥವಾ ಮಾದಕ ದ್ರವ್ಯಗಳನ್ನು ಡ್ರೋನ್‌ಗಳು ಇಳಿಸಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Most Read

error: Content is protected !!