ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕೀನ್ಯಾದ ಕರಾವಳಿ ಪ್ರದೇಶವಾದ ಕ್ವಾಲೆಯಲ್ಲಿ ಮಾಸಾಯಿ ಮಾರಾ ರಾಷ್ಟ್ರೀಯ ಅಭಯಾರಣ್ಯಕ್ಕೆ ತೆರಳುತ್ತಿದ್ದ ಸಣ್ಣ ವಿಮಾನವೊಂದು ಅಪಘಾತಕ್ಕೀಡಾಗಿದ್ದು, 12 ಜನರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ .
ಮಂಗಳವಾರ (ಅ.28) ಬೆಳಿಗ್ಗೆ 5Y-CCA ಸಂಖ್ಯೆಯ ವಿಮಾನವು ಡಯಾನಿಯಿಂದ ಕಿಚ್ವಾ ಟೆಂಬೊಗೆ ತೆರಳುತ್ತಿತ್ತು. ವಿಮಾನದಲ್ಲಿ 12 ಪ್ರವಾಸಿಗರು ಪ್ರಯಾಣಿಸುತ್ತಿದ್ದರು. ಈ ವೇಳೆ ಬೆಳಿಗ್ಗೆ 8:30ರ ಸುಮಾರಿಗೆ 0530Z ಎಂಬಲ್ಲಿ ಪತನಗೊಂಡಿದೆ ಎಂದು ಕೀನ್ಯಾ ನಾಗರಿಕ ವಿಮಾನಯಾನ ಪ್ರಾಧಿಕಾರ (Kenya Civil Aviation Authority) ದೃಢಪಡಿಸಿದೆ.
ಡಯಾನಿ ವಾಯುನೆಲೆಯಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿರುವ ಗುಡ್ಡಗಾಡು ಪ್ರದೇಶದಲ್ಲಿ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕ್ವಾಲೆ ಕೌಂಟಿ ಆಯುಕ್ತ ಸ್ಟೀಫನ್ ಒರಿಂಡೆ ಅಸೋಸಿಯೇಟೆಡ್ ಮಾಹಿತಿ ನೀಡಿ, ಪ್ರಯಾಣಿಕರೆಲ್ಲರೂ ವಿದೇಶಿ ಪ್ರವಾಸಿಗರು ಎಂದು ತಿಳಿಸಿದ್ದಾರೆ.

