April 9, 2026
Thursday, April 9, 2026
spot_img

ಫಾಸ್ಟ್‌ಟ್ಯಾಗ್ ಬಳಕೆದಾರರಿಗೆ ದೊಡ್ಡ ರಿಲೀಫ್: KYC ಕಿರಿಕಿರಿ ಇನ್ಮುಂದೆ ಇರಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫಾಸ್ಟ್‌ಟ್ಯಾಗ್ ನಿಯಮಗಳಲ್ಲಿ ಫೆಬ್ರವರಿ 1ರಿಂದ ದೊಡ್ಡ ಬದಲಾವಣೆ ಜಾರಿಯಾಗಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಫಾಸ್ಟ್‌ಟ್ಯಾಗ್ ಬಳಕೆದಾರರಿಗೆ ಬಹುಕಾಲದ ಕಿರಿಕಿರಿಯಾಗಿದ್ದ ಕೆವೈಸಿ ಪರಿಶೀಲನಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಪಡಿಸಿದೆ. ಈ ಕ್ರಮದಿಂದ ಲಕ್ಷಾಂತರ ವಾಹನ ಮಾಲೀಕರಿಗೆ ಮಹತ್ವದ ನಿರಾಳತೆ ಸಿಕ್ಕಿದೆ.

ಇದೀಗ ಫಾಸ್ಟ್‌ಟ್ಯಾಗ್ ಅನ್ನು ಒಮ್ಮೆ ಸಕ್ರಿಯಗೊಳಿಸಿದ ನಂತರ, ಮತ್ತೆ ಮತ್ತೆ ಕೆವೈಸಿ ಅಪ್‌ಡೇಟ್ ಮಾಡುವ ಅಗತ್ಯ ಇರುವುದಿಲ್ಲ. ವಾಹನದ ದಾಖಲೆಗಳು ಹಾಗೂ ಮಾಹಿತಿಯನ್ನು ಪರಿಶೀಲಿಸುವ ಸಂಪೂರ್ಣ ಜವಾಬ್ದಾರಿಯನ್ನು ಫಾಸ್ಟ್‌ಟ್ಯಾಗ್ ವಿತರಿಸುವ ಬ್ಯಾಂಕ್‌ಗಳೇ ವಹಿಸಿಕೊಳ್ಳಲಿವೆ.

ಇದರಿಂದ ಗ್ರಾಹಕರು ಟೋಲ್ ಪ್ಲಾಜಾಗಳಲ್ಲಿ ತೊಂದರೆ ಅನುಭವಿಸುವ ಸಂದರ್ಭಗಳು ಕಡಿಮೆಯಾಗಲಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !