Tuesday, December 23, 2025

ಗ್ರಾಹಕರಿಗೆ ಬಿಗ್‌ಶಾಕ್‌! ಜನವರಿಯಿಂದ ಹೆಚ್ಚಾಗಲಿದ್ಯಾ ರೀಚಾರ್ಜ್ ಯೋಜನೆಗಳು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹೊಸ ವರ್ಷದ ಸಂಭ್ರಮದಲ್ಲಿರೋ ಮೊಬೈಲ್ ಪ್ರಿಯರಿಗೆ ದೊಡ್ಡ ಆಘಾತ ಕಾದಿದೆ. 2026ರಲ್ಲಿ ಮೊಬೈಲ್ ರೀಚಾರ್ಜ್ ಯೋಜನೆಗಳು ಮತ್ತಷ್ಟು ದುಬಾರಿ ಆಗುವ ಸಾಧ್ಯತೆ ಇದೆ.

ವರದಿಗಳ ಪ್ರಕಾರ, ರಿಲಯನ್ಸ್ ಜಿಯೋ, ಏರ್‌ಟೆಲ್, ವೊಡಾಫೋನ್ ಐಡಿಯಾ ತಮ್ಮ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಯೋಜನೆಗಳ ಬೆಲೆಗಳನ್ನು ಶೇಕಡಾ 20 ರಷ್ಟು ಹೆಚ್ಚಿಸಬಹುದು ಎಂದು ಹೇಳಲಾಗಿದೆ.

ಹಲವಾರು ಆಯ್ದ ಯೋಜನೆಗಳಲ್ಲಿನ ಸುಂಕ ಹೆಚ್ಚಳದ ಬಗ್ಗೆ ಕಂಪನಿಯ ಅಧಿಕಾರಿಗಳಿಗೆ ಮಾಹಿತಿ ಸಲ್ಲಿಸಲಾಗಿದೆ. ಟೆಲಿಕಾಂ ಕಂಪನಿಗಳು ಕಳೆದ ಒಂದು ತಿಂಗಳಿನಿಂದ ತಮ್ಮ ಯೋಜನೆಗಳನ್ನು ಪರಿಷ್ಕರಿಸುತ್ತಿವೆ. ಇದು ಸಾಮಾನ್ಯ ಬಳಕೆದಾರರ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಅದರಲ್ಲೂ ವಿಶೇಷವಾಗಿ 5G ಬಳಕೆದಾರರು ಹೆಚ್ಚು ಪರಿಣಾಮ ಬೀರಲಿದೆ ಎನ್ನಲಾಗಿದೆ. 

ಸಂಶೋಧನಾ ಸಂಸ್ಥೆ ಮಾರ್ಗನ್ ಸ್ಟಾನ್ಲಿ ಪ್ರಕಾರ.. ಭಾರತೀಯ ಟೆಲಿಕಾಂ ಕಂಪನಿಗಳು 2026ರಲ್ಲಿ ತಮ್ಮ ದರಗಳನ್ನು ಶೇಕಡಾ 16 ರಿಂದ 20 ರಷ್ಟು ಹೆಚ್ಚಿಸಬಹುದು. ಕಂಪನಿಗಳ ಪ್ರತಿ ಬಳಕೆದಾರರಿಗೆ ಸರಾಸರಿ ಆದಾಯ (ARPU) ಹೆಚ್ಚಿಸುವುದು ಇದರ ಗುರಿ. ಕೊನೆಯ ದರ ಏರಿಕೆ ಜುಲೈ 2024 ರಲ್ಲಿ ಆಗಿತ್ತು. ಇದೀಗ ಮತ್ತೆ ಅದು ಪುನಾರವರ್ತನೆ ಆಗಲಿದೆ. ಅಂದರೆ ಎರಡು ವರ್ಷಗಳ ನಂತರ ಬೆಲೆಗಳು ಮತ್ತೆ ಹೆಚ್ಚಾಗಲಿವೆ ಎಂದು ಹೇಳಿದೆ. 

error: Content is protected !!