ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶಾದ್ಯಂತ ಅಡುಗೆ ಅನಿಲ ರೀಫಿಲ್ಲಿಂಗ್ ನಿಯಮದಲ್ಲಿ ಕೇಂದ್ರ ಸರ್ಕಾರ ಪ್ರಮುಖ ಬದಲಾವಣೆ ಮಾಡಿದೆ. ಇರಾನ್‌ನಲ್ಲಿನ ಯುದ್ಧದ ಭೀತಿ ಮತ್ತು ಜಾಗತಿಕ ಇಂಧನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಈ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.
ಎರಡು ಸಿಲಿಂಡರ್ ಬುಕಿಂಗ್‌ಗಳ ನಡುವಿನ ಕನಿಷ್ಠ ಅಂತರವನ್ನು 21 ದಿನಗಳಿಂದ 25 ದಿನಗಳಿಗೆ ಹೆಚ್ಚಿಸಲಾಗಿದೆ. ಅಂದರೆ, ಒಮ್ಮೆ ಬುಕ್ ಮಾಡಿದರೆ ಮುಂದಿನ 25 ದಿನಗಳವರೆಗೆ ಮತ್ತೊಂದು ಸಿಲಿಂಡರ್ ಬುಕ್ ಮಾಡಲು ಸಾಧ್ಯವಿಲ್ಲ.
ದೇಶದಲ್ಲಿ ಅಡುಗೆ ಅನಿಲದ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿದೆ. ಜನರು ಆತಂಕಗೊಂಡು ಮುಗಿಬಿದ್ದು ಬುಕಿಂಗ್ ಮಾಡುವ ಅಗತ್ಯವಿಲ್ಲ ಎಂದು ಸಚಿವಾಲಯ ತಿಳಿಸಿದೆ.
ಇರಾನ್ ಮತ್ತು ಪಾಶ್ಚಿಮಾತ್ಯ ದೇಶಗಳ ನಡುವಿನ ಸಂಘರ್ಷದಿಂದಾಗಿ ತೈಲ ಬೆಲೆ ಏರಿಕೆ ಹಾಗೂ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇರುವುದರಿಂದ ಈ “ರೇಷನಿಂಗ್” ನಿಯಮ ಜಾರಿಗೆ ತರಲಾಗಿದೆ.
ಸರ್ವರ್ ದಟ್ಟಣೆಯಿಂದಾಗಿ ಬುಕಿಂಗ್ ವಿಳಂಬವಾಗಬಹುದು, ಗ್ರಾಹಕರು ತಾಳ್ಮೆಯಿಂದ ಸಹಕರಿಸಲು ವಿನಂತಿಸಲಾಗಿದೆ.



