ಹೊಸ ದಿಗಂತ ಡಿಜಿಟಲ್ ಡೆಸ್ಕ್:
22 ಅರಬ್ ರಾಷ್ಟ್ರಗಳ ನಾಯಕರು ಇಂದು ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿದ್ದಾರೆ.
ಅರಬ್ ರಾಷ್ಟ್ರಗಳ ವಿದೇಶಾಂಗ ಸಚಿವರು ಮತ್ತು ಅರಬ್ ಲೀಗ್‌ನ ಪ್ರಧಾನ ಕಾರ್ಯದರ್ಶಿಗಳು ಭೇಟಿ ಮಾಡಿದ್ದು , ಇದು, ಭಾರತ ಮತ್ತು ಅರಬ್ ಜಗತ್ತಿನ ನಡುವೆ ಬೆಳೆಯುತ್ತಿರುವ ಸಂಬಂಧದ ಮೈಲಿಗಲ್ಲಾಗಿದೆ.
ಇದರಿಂದ ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ .ಒಂದೆಡೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್, ನಾನು ಮತ್ತು ಅಸಿಮ್ ಮುನೀರ್ ದೇಶವನ್ನು ನಡೆಸಲು ಹಣಕ್ಕಾಗಿ ಜಗತ್ತನ್ನು ಸುತ್ತುತ್ತಾ ಭಿಕ್ಷೆ ಬೇಡುತ್ತಿದ್ದೇವೆ ಎಂದಿದ್ದು, ಅದರ ಸಾಕು ತಂದೆ ಚೀನಾ ಅಥವಾ ಅಮೆರಿಕ ಇಲ್ಲಾ, ಮುಸ್ಲಿಂ ಬ್ರದರ್‌ಹುಡ್ ಎನ್ನುತ್ತಾ ಅರಬ್ ರಾಷ್ಟ್ರಗಳು ಹಿಂದೆ ಸಾಲಕ್ಕೆ ಸುತ್ತಿದ್ದರು ಸಹ, ಒಂದು ನಯಾಪೈಸೆ ಹುಟ್ಟುತ್ತಿಲ್ಲ.
ಯಾಕೆಂದರೆ, ಧರ್ಮದ ಹೆಸರಿನಲ್ಲಿ ಅರಬ್ ರಾಷ್ಟ್ರಗಳಿಂದ ನಿರಂತರ ಆರ್ಥಿಕ ನೆರವು ಮತ್ತು ಬೆಂಬಲದ ನಿರೀಕ್ಷೆಯಲ್ಲಿದ್ದ ಪಾಕಿಸ್ತಾನದ ಭ್ರಮೆಯನ್ನು ಮೋದಿ ಅವರ ಚಾಣಾಕ್ಷ ರಾಜತಾಂತ್ರಿಕತೆ ದೂರ ಮಾಡಿದೆ. ಇದೀಗ ಅರಬ್ ದೇಶಗಳು ಧಾರ್ಮಿಕ ಭಾವನೆಗಳಿಗಿಂತ ಹೆಚ್ಚಾಗಿ ಆರ್ಥಿಕ ಹಿತಾಸಕ್ತಿ ಮತ್ತು ಕಾರ್ಯತಂತ್ರದ ಪಾಲುದಾರಿಕೆಗೆ ಆದ್ಯತೆ ನೀಡುತ್ತಿದ್ದು, ಬೃಹತ್ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿರುವ ಭಾರತದ ಜೊತೆಗಿನ ಸ್ನೇಹ ಈಗ ಅತ್ಯಂತ ಅನಿವಾರ್ಯ ಎಂದು ಮನಗಂಡಂತೆ ಕಾಣುತ್ತಿದೆ.
ಪ್ರಧಾನಿ ಮೋದಿ ಭೇಟಿ ಸಮಯ ಪಶ್ಚಿಮ ಏಷ್ಯಾದಲ್ಲಿ ಶಾಂತಿ ಮತ್ತು ಸ್ಥಿರತೆ ಹೆಚ್ಚಿಸುವಲ್ಲಿ ಅರಬ್ ಲೀಗ್ ವಹಿಸಿರುವ ಪಾತ್ರವನ್ನು ಪ್ರಶಂಸಿಸಿದ್ದಾರೆ ಎಂದು ಪ್ರಧಾನ ಮಂತ್ರಿಗಳ ಕಾರ್ಯಾಲಯ ತಿಳಿಸಿದೆ.
ಪ್ರಧಾನಿ ಮೋದಿ ಕೂಡ ಟ್ವೀಟ್ ಮಾಡಿ, ಇಂದು ಅರಬ್ ಲೀಗ್‌ನ ವಿದೇಶಾಂಗ ಮಂತ್ರಿಗಳು ಮತ್ತು ನಿಯೋಗಗಳನ್ನು ಸ್ವಾಗತಿಸಲು ಸಂತೋಷವಾಗುತ್ತಿದೆ. ಅರಬ್ ಜಗತ್ತು ಭಾರತದ ವಿಸ್ತೃತ ನೆರೆಹೊರೆಯ ಭಾಗವಾಗಿದ್ದು, ಆಳವಾದ ನಾಗರಿಕತೆಯ ಬಂಧಗಳು, ರೋಮಾಂಚಕ ಜನರಿಂದ ಜನರಿಗೆ ಸಂಪರ್ಕಗಳು ಮತ್ತು ಶಾಶ್ವತ ಸಹೋದರ ಸಂಬಂಧಗಳು ಹಾಗೂ ಶಾಂತಿ, ಪ್ರಗತಿ ಮತ್ತು ಸ್ಥಿರತೆಗೆ ಹಂಚಿಕೆಯ ಬದ್ಧತೆಯಿಂದ ಸಂಪರ್ಕ ಹೊಂದಿದೆ. ತಂತ್ರಜ್ಞಾನ, ಇಂಧನ, ವ್ಯಾಪಾರ ಮತ್ತು ನಾವೀನ್ಯತೆಯಲ್ಲಿ ವರ್ಧಿತ ಸಹಕಾರವು ಹೊಸ ಅವಕಾಶಗಳನ್ನು ತೆರೆಯುತ್ತದೆ ಮತ್ತು ಪಾಲುದಾರಿಕೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.



