ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಷ್ಯಾಕಪ್ ಫೈನಲ್ ಪಂದ್ಯಕ್ಕೂ ಮುನ್ನ ಪಾಕಿಸ್ತಾನ್ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ಹಾರಿಸ್ ಗಾಯಗೊಂಡಿದ್ದಾರೆ. ದುಬೈನಲ್ಲಿ ನಡೆದ ಅಭ್ಯಾಸ ಸೆಷನ್ ವೇಳೆ ಮೊಹಮ್ಮದ್ ವಾಸಿಂ ಜೂನಿಯರ್ ಎಸೆದ ಚೆಂಡು ನೇರವಾಗಿ ಹಾರಿಸ್ ಅವರ ಹೊಟ್ಟೆಗೆ ಬಡಿದಿದ್ದು, ತೀವ್ರ ನೋವಿನಿಂದ ಅವರು ಮೈದಾನದಲ್ಲೇ ಕುಸಿದು ಕೂತಿದ್ದಾರೆ. ಬಳಿಕ ಅವರು ಅಭ್ಯಾಸವನ್ನು ಮುಂದುವರೆಸಲಿಲ್ಲ.
ಭಾರತದ ವಿರುದ್ಧ ನಡೆಯಲಿರುವ ಅಂತಿಮ ಪಂದ್ಯ ಎದುರಿಸುವ ಮೊದಲು ಹಾರಿಸ್ ಗಾಯಗೊಂಡಿರುವುದು ಪಾಕಿಸ್ತಾನಕ್ಕೆ ಚಿಂತೆ ಉಂಟುಮಾಡಿದೆ. ತಂಡದಲ್ಲಿ ಬದಲಿ ಅನುಭವಿ ವಿಕೆಟ್ ಕೀಪರ್ ಬ್ಯಾಟರ್‌ಗಳ ಕೊರತೆಯಿದ್ದು, ಹಾರಿಸ್ ಲಭ್ಯವಿರದಿದ್ದರೆ ಪಾಕಿಸ್ತಾನ್ ತಂಡ ಸಂಕಷ್ಟಕ್ಕೆ ಸಿಲುಕುವುದು ಖಚಿತ.
ಪಾಕಿಸ್ತಾನ್ ತಂಡದಲ್ಲಿ ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಫಖರ್ ಝಮಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಹಸನ್ ನವಾಝ್, ಹುಸೇನ್ ತಲತ್, ಖುಷ್ದಿಲ್ ಶಾ, ಮೊಹಮ್ಮದ್ ಹಾರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಂ ಜೂನಿಯರ್, ಸಾಹಿಬ್‌ಝಾದ್ ಫರ್ಹಾನ್, ಶಾಹೀನ್ ಅಫ್ರಿದಿ, ಸಲ್ಮಾನ್ ಮಿರ್ಝಾ, ಸೈಮ್ ಅಯ್ಯೂಬ್ ಮತ್ತು ಸುಫಿಯಾನ್ ಮುಖಿಮ್ ಇದ್ದಾರೆ.
ಈಗಾಗಲೇ ಬಲಿಷ್ಠ ತಂಡವಿಲ್ಲದೆ ಒತ್ತಡದಲ್ಲಿರುವ ಪಾಕಿಸ್ತಾನ್ ತಂಡಕ್ಕೆ ಹಾರಿಸ್ ಗಾಯ ಹೊಸ ತಲೆನೋವನ್ನೇ ತಂದಿದೆ. ಅವರ ಸ್ಥಿತಿಗತಿ ಕುರಿತು ವೈದ್ಯಕೀಯ ವರದಿ ಇನ್ನಷ್ಟೇ ಬರಬೇಕಿದೆ.