February 16, 2026
Monday, February 16, 2026
spot_img

ಪ್ರಯಾಣಿಕರಿಗೆ ಬಿಗ್‌ಶಾಕ್‌: ಕೆಎಸ್‌ಆರ್‌ಟಿಸಿಯಲ್ಲಿ ಇಂದಿನಿಂದಲೇ ಲಗೇಜ್ ದರ ಹೆಚ್ಚಳ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರಯಾಣಿಕರಿಗೆ ಇಂದಿನಿಂದ ಲಗೇಜ್‌ ದರ ಹೆಚ್ಚಳದ ಬಿಸಿ ಮುಟ್ಟಲಿದೆ. ಕೆಎಸ್‌ಆರ್‌ಟಿಸಿ ಮತ್ತೊಂದು ದರ ಏರಿಕೆಗೆ ನಿರ್ಧರಿಸಿದ್ದು, ಬಸ್‌ನಲ್ಲಿ ಸಾಗಿಸುವ ಲಗೆಜ್‌ ದರವನ್ನು ಹೆಚ್ಚು ಮಾಡಿದೆ.

ಇಂದಿನಿಂದಲೇ ಈ ಹೊಸ ಶುಲ್ಕ ಜಾರಿಗೆ ಬರಲಿದೆ.30 ಕೆಜಿ ವರೆಗೆ ಉಚಿತವಾಗಿ ಲಗೇಜ್ ಸಾಗಿಸಲು ಅವಕಾಶ ಇದೆ. ಹೊಸ ನಿಯಮದ ಪ್ರಕಾರ, ಈ ಮಿತಿಗಿಂತ ಹೆಚ್ಚಿನ ಲಗೇಜ್‌ಗೆ ಪ್ರತಿ ಕೆಜಿಗೆ 6 ರೂಪಾಯಿಯಿಂದ 145 ರೂ.ವರೆಗೆ ಶುಲ್ಕ ವಿಧಿಸಲಾಗುತ್ತದೆ.

ಪ್ರಯಾಣದ ದೂರ ಮತ್ತು ಸ್ಟೇಜ್​ಗಳ ಆಧಾರದ ಮೇಲೆ ದರ ಬದಲಾಗುತ್ತದೆ. ಕೆಎಸ್‌ಆರ್‌ಟಿಸಿಯಲ್ಲಿ ಒಂದು ಸ್ಟೇಜ್ ಎಂದರೆ ಸುಮಾರು ಆರು ಕಿಲೋಮೀಟರ್ ಎಂದು ಪರಿಗಣಿಸಲಾಗುತ್ತದೆ. ಹಿಂದಿನ ದರಗಳಿಗೆ ಹೋಲಿಸಿದರೆ ಈ ಬಾರಿ ಸುಮಾರು ಶೇ 15 ರಷ್ಟು ದರ ಏರಿಕೆ ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !