ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಉರ್ವಶಿ ರೌಟೇಲಾ, ನಟ ಸೋನು ಸೂದ್ ಹಾಗೂ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಸೇರಿದಂತೆ ಕೆಲ ಸೆಲೆಬ್ರೆಟಿಗಳಿಗೆ ಇಂದು ಜಾರಿ ನಿರ್ದೇಶನಾಲಯ (ಇಡಿ) ಶಾಕ್ ಕೊಟ್ಟಿದೆ. ಈ ಮೂವರ ಒಟ್ಟು 7.9 ಕೋಟ ರೂಪಾಯಿ ಆಸ್ತಿ ಮುಟ್ಟುಗೋಲು ಮಾಡಿದೆ.
1xBet ಬೆಟ್ಟಿಂಗ್ ಆ್ಯಪ್ ವಿರುದ್ಧ ತನಿಖೆ ತೀವ್ರಗೊಳಿಸಿರುವ ಇಡಿ ಅಧಿಕಾರಿಗಳು ಮುಖರ ಆಸ್ತಿ ಮುಟ್ಟುಗೋಲು ಮಾಡಿದೆ. ಇತ್ತೀಚೆಗಷ್ಟೇ ಇಡಿ ಸುರೇಶ್ ರೈನಾ ಹಾಗೂ ಶಿಖರ್ ಧವನ್ ಅವರ 11.19 ಕೋಟಿ ರೂಪಾಯಿ ಆಸ್ತಿ ಮುಟ್ಟುಗೋಲು ಹಾಕಿತ್ತು.
1xBet ಬೆಟ್ಟಿಂಗ್ ಆ್ಯಪ್ ನಡೆಸಿರುವ ಅಕ್ರಮ ವ್ಯವಹಾರ, ಮನಿ ಲಾಂಡರಿಂಗ್ ಸೇರಿದಂತೆ ಹಲವು ಅಕ್ರಮಗಳ ಕುರಿತು ಇಡಿ ತನಿಖೆ ನಡೆಸುತ್ತಿದೆ. ಈ ಪೈಕಿ ಹಲವು ಕ್ರಿಕೆಟಿಗರು, ಸಿನಿಮಾ ಸೆಲೆಬ್ರೆಟಿಗಳು ಹಾಗೂ ಕೆಲ ನಾಯಕರ ಹೆಸರಿದೆ ಎಂದು ಇಡಿ ಹೇಳಿದೆ. ಸದ್ಯ ತನಿಖೆ ತೀವ್ರಗೊಳಿಸಿ ಯುವರಾಜ್ ಸಿಂಗ್, ಸೋನು ಸೂದ್ ಹಾಗೂ ಉರ್ವಶಿ ರೌಟೇಲಾ ಸೇರಿದಂತೆ ಕೆಲ ಪ್ರಮುಖರಿಗೆ ಸೇರಿದ ಆಸ್ತಿಯನ್ನು ಮುಟ್ಟುಗೋಲು ಮಾಡಿದೆ.
ಯುವರಾಜ್ ಸಿಂಗ್ : 2.5 ಕೋಟಿ ರೂಪಾಯಿ
ಉರ್ವಶಿ ರೌಟೇಲಾ : 2.02 ಕೋಟಿ ರೂಪಾಯಿ
ಸೋನು ಸೂದ್ : 1 ಕೋಟಿ ರೂಪಾಯಿ
ನೇಹಾ ಶರ್ಮಾ : 1.26 ಕೋಟಿ ರೂಪಾಯಿ
ಮಿಮಿ ಚಕ್ರಬೋರ್ತಿ (ಟಿಎಂಸಿ ನಾಯಕ) : 59 ಲಕ್ಷ ರೂಪಾಯಿ
ಅಂಕುಶ್ ಹಜಾರ್ : 47.29 ಲಕ್ಷ ರೂಪಾಯಿ
ರಾಬಿನ್ ಉತ್ತಪ್ಪ : 8.26 ಲಕ್ಷ ರೂಪಾಯಿ
ಇಡಿ ಈಗಾಗಲೇ ಹೈಪ್ರೊಫೈಲ್ ವ್ಯಕ್ತಿಗಳ ವಿರುದ್ದವೂ ಇಡಿ ಕ್ರಮ ಕೈಗೊಂಡಿದೆ. ಇತ್ತೀಚೆಗೆ ಇಡಿ ಕ್ರಿಕೆಟಿಗ ಶಿಖರ್ ಧವನ್ ಅವರ 4.55 ಕೋಟಿ ರೂಪಾಯಿ ಆಸ್ತಿ, ಸುರೇಶ್ ರೈನಾ ಅವರ 6.64 ಕೋಟಿ ರೂಪಾಯಿ ಆಸ್ತಿ ಮುಟ್ಟುಗೋಲು ಮಾಡಿತ್ತು. ಈ ಮೂಲಕ ಕಳೆದ ಕೆಲ ತಿಂಗಳಲ್ಲಿ ಇಡಿ ಒಟ್ಟು 19.07 ಕೋಟಿ ರೂಪಾಯಿ ಆಸ್ತಿ ಮಟ್ಟುಗೋಲು ಮಾಡಿದೆ.

