ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತ ಭೇಟಿಗೆ ಮುನ್ನ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಸರ್ಕಾರ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದ್ದು, 2008ರಮುಂಬೈ ದಾಳಿಯ ಮಾಸ್ಟರ್ ಮೈಂಡ್ ತಹವ್ವೂರ್ ರಾಣಾ ಪೌರತ್ವವನ್ನು ರದ್ದುಗೊಳಿಸುವ ನಿರ್ಧರಿಸಿದೆ.
ಪಾಕಿಸ್ತಾನ ಮೂಲದ ಉದ್ಯಮಿ ತಹಾವ್ವೂರ್ ರಾಣಾ ಅವರ ಕೆನಡಾ ಪೌರತ್ವವನ್ನು ರದ್ದುಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. 2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ರಾಣಾ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ.
64 ವರ್ಷದ ರಾಣಾ 1997 ರಲ್ಲಿ ಕೆನಡಾಕ್ಕೆ ವಲಸೆ ಬಂದು 2001 ರಲ್ಲಿ ಕೆನಡಾದ ಪೌರತ್ವವನ್ನು ಪಡೆದಿದ್ದ. ಈತ 26/11 ದಾಳಿಯ ಮಾಸ್ಟರ್ ಮೈಂಡ್ ಡೇವಿಡ್ ಕೋಲ್ಮನ್ ಹೆಡ್ಲಿ ಅಲಿಯಾಸ್ ದಾವೂದ್ ಗಿಲಾನಿ ಅವರ ಆಪ್ತ ಸಹಚರ ಎಂದು ಹೇಳಲಾಗುತ್ತಿದೆ.
ಏಪ್ರಿಲ್ 2025 ರಲ್ಲಿ ಆತನನ್ನು ಅಮೆರಿಕದಿಂದ ಭಾರತಕ್ಕೆ ಹಸ್ತಾಂತರಿಸಲಾಯಿತು. ಬಳಿಕ ದೆಹಲಿಗೆ ಆಗಮಿಸಿದ ನಂತರ,ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿತ್ತು.
ಸುಳ್ಳು ಮಾಹಿತಿ ನೀಡಿದ್ದರಿಂದ ಕೆನಡಾದ ವಲಸೆ ಇಲಾಖೆಯು ರಾಣಾನ ಪೌರತ್ವವನ್ನು ರದ್ದುಗೊಳಿಸುತ್ತಿದೆ ಎಂದು ಸ್ಪಷ್ಟಪಡಿಸಿದೆ. ಇಲಾಖೆಯ ಪ್ರಕಾರ, ರಾಣಾ ತಮ್ಮ ಅರ್ಜಿಯಲ್ಲಿ ಸುಳ್ಳು ಹೇಳಿದ್ದಾರೆ. ಅವರು ಒಟ್ಟಾವಾ ಮತ್ತು ಟೊರೊಂಟೊದಲ್ಲಿ ನಾಲ್ಕು ವರ್ಷಗಳ ಕಾಲ ವಾಸಿಸುತ್ತಿದ್ದರು ಮತ್ತು ಕೇವಲ ಆರು ದಿನಗಳ ಕಾಲ ದೇಶದಿಂದ ಹೊರಗಿದ್ದೆ ಎಂದು ಹೇಳಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು ನಡೆಸಿದ ತನಿಖೆಯಲ್ಲಿ ರಾಣಾ ಆ ಅವಧಿಯಲ್ಲಿ ಹೆಚ್ಚಿನ ಸಮಯ ಚಿಕಾಗೋದಲ್ಲಿದ್ದರು ಎಂದು ತಿಳಿದುಬಂದಿದೆ. ಈ ಸುಳ್ಳು ಮಾಹಿತಿಯು ಆತ ಅರ್ಹರಲ್ಲದಿದ್ದರೂ ಪೌರತ್ವವನ್ನು ಪಡೆಯಲು ಅವಕಾಶ ಮಾಡಿಕೊಟ್ಟಿದೆ ಎಂದು ಇಲಾಖೆ ಹೇಳಿದೆ.



