Sunday, November 9, 2025

ಬಿಹಾರ 2ನೇ ಹಂತದ ವಿಧಾನಸಭೆ ಚುನಾವಣೆ: ನೇಪಾಳ-ಭಾರತ ಗಡಿ ಪಾಯಿಂಟ್ ಬಂದ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬಿಹಾರ ವಿಧಾನಸಭೆ ಚುನಾವಣೆಯ ಎರಡನೇ ಹಂತಕ್ಕೆ ಮುಂಚಿತವಾಗಿ, ನೇಪಾಳ-ಭಾರತ ಗಡಿಯುದ್ದಕ್ಕೂ ಇರುವ ಗಡಿ ಪಾಯಿಂಟ್ ಗಳನ್ನು 72 ಗಂಟೆಗಳ ಕಾಲ ಬಂದ್ ಮಾಡಲಾಗಿದೆ.

ಸರ್ಲಾಹಿ, ಮಹೋಟ್ಟಾರಿ ಮತ್ತು ರೌತತ್ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿನ ಗಡಿ ಪಾಯಿಂಟ್ ಗಳನ್ನು ಮೂರು ದಿನಗಳವರೆಗೆ ಮುಚ್ಚಲಾಗಿದೆ. ಮಹೋಟ್ಟಾರಿ ಜಿಲ್ಲೆ ಭಾರತದೊಂದಿಗಿನ ತನ್ನ ಹನ್ನೊಂದು ಗಡಿ ಪಾಯಿಂಟ್ ಳನ್ನು ಬಂದ್ ಮಾಡಿದೆ.

ನವೆಂಬರ್ 11 ರಂದು ಬಿಹಾರದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ, ಭದ್ರತಾ ದೃಷ್ಟಿಕೋನದಿಂದ, ನಾವು ಗಡಿಯುದ್ದಕ್ಕೂ ಜನ ಸಂಚಾರವನ್ನು ಸ್ಥಗಿತಗೊಳಿಸಿದ್ದೇವೆ. ಮಹೋಟ್ಟಾರಿ ಜಿಲ್ಲೆಯ ಎಲ್ಲಾ ಗಡಿ ಪಾಯಿಂಟ್ ಗಳನ್ನು ಮುಚ್ಚಲಾಗಿದೆ. ಶನಿವಾರ ಸಂಜೆ 6 ರಿಂದ ಮಂಗಳವಾರ ಸಂಜೆ 6 ರವರೆಗೆ ಗಡಿ ಪಾಯಿಂಟ್ ಗಳನ್ನು ಬಂದ್ ಮಾಡಲಾಗಿದೆ ಎಂದು ಮಹೋಟ್ಟಾರಿಯ ಸಹಾಯಕ ಮುಖ್ಯ ಜಿಲ್ಲಾ ಅಧಿಕಾರಿ ಸಂಜಯ್ ಕುಮಾರ್ ಪೋಖ್ರೆಲ್ ಅವರು ಹೇಳಿದ್ದಾರೆ.

ತುರ್ತು ಪ್ರಕರಣಗಳನ್ನು ಹೊರತುಪಡಿಸಿ, ಗಡಿಯಾಚೆಗಿನ ಎಲ್ಲಾ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು ಎಂದು ಭಾರತದ ಗಡಿಯುದ್ದಕ್ಕೂ ಇರುವ ಜಿಲ್ಲಾಡಳಿತ ಕಚೇರಿಗಳು ತಿಳಿಸಿವೆ.

error: Content is protected !!