Monday, November 3, 2025

‘ಛಠ್ ಮೈಯ್ಯ’ ಅವಮಾನವನ್ನು ಬಿಹಾರ ಎಂದಿಗೂ ಕ್ಷಮಿಸುವುದಿಲ್ಲ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಹಾರ ಚುನಾವಣೆಯಲ್ಲಿ ಮತಗಳನ್ನು ಪಡೆಯಲು ಕಾಂಗ್ರೆಸ್ ಮತ್ತು ಆರ್‌ಜೆಡಿ ನಾಯಕರು ‘ಛಠ್ ಮೈಯ್ಯ'(Chhathi maiyya ಪ್ರಕೃತಿಯ ಆರನೇ ರೂಪ ಮತ್ತು ಸೂರ್ಯ ದೇವನ ಸಹೋದರಿ-ಛಠ್ ಪೂಜೆ ಇದು ಬಿಹಾರದಲ್ಲಿ ಆಚರಿಸುವ ಹಬ್ಬ)ರನ್ನು ಅವಮಾನಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಆರೋಪಿಸಿದ್ದಾರೆ.

ಮುಜಫರ್‌ಪುರದಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಛಠ್ ಪೂಜೆ ಕಾಂಗ್ರೆಸ್ ಮತ್ತು ಆರ್‌ಜೆಡಿ ನಾಯಕರಿಗೆ “ನಾಟಕ”ವಾಗಿತ್ತು. ಆದರೆ ಬಿಹಾರದ ಜನರು ಈ “ಅವಮಾನ”ವನ್ನು ವರ್ಷಗಳವರೆಗೆ ಎಂದಿಗೂ ಮರೆಯುವುದಿಲ್ಲ ಮತ್ತು ಅವರನ್ನು ಕ್ಷಮಿಸುವುದಿಲ್ಲ ಎಂದು ಹೇಳಿದರು.

“ಛಠ್ ಪೂಜೆಯ ನಂತರ ಇದು ನನ್ನ ಮೊದಲ ಬಿಹಾರ ಪ್ರವಾಸವಾಗಿದೆ. ಈ ಹಬ್ಬವು ಭಕ್ತಿಗಾಗಿ ಮಾತ್ರವಲ್ಲದೆ ಸಮಾನತೆಗಾಗಿಯೂ ನಿಂತಿದೆ, ಅದಕ್ಕಾಗಿಯೇ ನನ್ನ ಸರ್ಕಾರ ಈ ಹಬ್ಬಕ್ಕೆ ಯುನೆಸ್ಕೋ ಪರಂಪರೆಯ ಟ್ಯಾಗ್ ಪಡೆಯಲು ಪ್ರಯತ್ನಿಸುತ್ತಿದೆ” ಎಂದು ಅವರು ಹೇಳಿದರು.

error: Content is protected !!