February 2, 2026
Monday, February 2, 2026
spot_img

ಬಿರಿಯಾನಿ ವಿಚಾರ | ಕೊನೆಗೂ ಮೌನ ಮುರಿದ ಡಾಲಿ: ಏನ್ ಹೇಳಿದ್ರು ನೋಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ಡಾಲಿ ಧನಂಜಯ್ ಹೆಸರು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆದರೆ ಈ ಬಾರಿ ಸಿನಿಮಾ ಅಥವಾ ಪಾತ್ರದ ವಿಚಾರವಲ್ಲ, ಅವರು ಬಿರಿಯಾನಿ ತಿಂದಿರೋದಕ್ಕೆ. ಹೌದು! ಬೆಂಗಳೂರಿನ ಅಪ್ಪು’ಸ್ ಬಿರಿಯಾನಿ ಹೋಟೆಲ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಧನಂಜಯ್ ಆಹಾರ ಸೇವಿಸಿದ ದೃಶ್ಯ ವೈರಲ್ ಆಗಿ, ಅನಗತ್ಯ ಚರ್ಚೆಗಳು ಆರಂಭವಾಗಿವೆ..

ಈ ಬಗ್ಗೆ ಪ್ರತಿಕ್ರಿಯಿಸಿದ ಡಾಲಿ ಧನಂಜಯ್, ತಮ್ಮ ಆಹಾರ ಪದ್ಧತಿ ಬಗ್ಗೆ ಸಾರ್ವಜನಿಕವಾಗಿ ಮಾತನಾಡಲು ತಾನು ಇಷ್ಟಪಡೋದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸ್ನೇಹಿತನ ಹೋಟೆಲ್ ಉದ್ಘಾಟನೆಗೆ ಸರಳವಾಗಿ ಹೋಗಿ ಪ್ರೀತಿಯಿಂದ ಊಟ ಮಾಡಿಕೊಂಡು ಬಂದೆ, ಇದೊಂದು ದೊಡ್ಡ ವಿಚಾರವಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ. ಇಂತಹ ವಿಷಯದ ಮೇಲೆ ಚರ್ಚೆ ನಡೆಯುತ್ತಿರುವುದನ್ನು ನೋಡಿ ಶಾಕ್ ಆಯ್ತು ಎಂದು ಅವರು ಹೇಳಿದರು.

ಇದನ್ನೂ ಓದಿ:

ಮಾಂಸಾಹಾರ ಸೇವನೆಯ ಜೊತೆಗೆ ಸಮುದಾಯವನ್ನು ಎಳೆದು ತರುವ ಪ್ರಯತ್ನ ಬೇಸರ ತಂದಿದೆ ಎಂದು ಡಾಲಿ ಅಸಮಾಧಾನ ವ್ಯಕ್ತಪಡಿಸಿದರು. “ನನ್ನ ಆಹಾರ ನನ್ನ ಆಯ್ಕೆ. ಇದಕ್ಕೆ ಬೇರೆ ಬೇರೆ ಅರ್ಥ ಕೊಡೋದು ತಪ್ಪು,” ಎಂದು ಹೇಳಿದರು. ತಾನು ನಟನಾಗಿ ಹಾಗೂ ನಿರ್ಮಾಪಕನಾಗಿ ಸಿನಿಮಾಗಳಿಗಾಗಿ ಮಾಡುವ ಪ್ರಯತ್ನಗಳ ಬಗ್ಗೆ ಚರ್ಚೆ ನಡೆಯಬೇಕು ಎಂಬುದು ನನ್ನ ಆಶಯ ಎಂದು ಡಾಲಿ ಧನಂಜಯ್ ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !