Wednesday, January 14, 2026
Wednesday, January 14, 2026
spot_img

ಮಂಕಿ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ!

ಹೊಸದಿಗಂತ ಹೊನ್ನಾವರ:

ತೀವ್ರ ಕುತೂಹಲ ಕೆರಳಿಸಿದ್ದ ಹೊನ್ನಾವರ ತಾಲ್ಲೂಕಿನ ಮಂಕಿ ಪಟ್ಟಣ ಪಂಚಾಯತಿಯ ಪ್ರಪ್ರಥಮ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಭರ್ಜರಿ ಜಯ ದಾಖಲಿಸಿದೆ. ಒಟ್ಟು 20 ಸ್ಥಾನಗಳ ಪೈಕಿ 12 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಕಾಂಗ್ರೆಸ್ ಕೇವಲ 8 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಬಿಜೆಪಿಯ ಈ ಅಭೂತಪೂರ್ವ ಯಶಸ್ಸಿನ ಬೆನ್ನಲ್ಲೇ ಕಾರ್ಯಕರ್ತರು ಹೊನ್ನಾವರದ ಶರಾವತಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಪ್ರಮುಖ ನಾಯಕರು ಈ ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.

ಈ ಚುನಾವಣೆ ಜಿಲ್ಲೆಯ ರಾಜಕೀಯ ಸಮೀಕರಣದಲ್ಲಿ ಪ್ರಮುಖ ಬದಲಾವಣೆಯ ಮುನ್ಸೂಚನೆ ನೀಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರ ಸ್ವಕ್ಷೇತ್ರದಲ್ಲೇ ಕಾಂಗ್ರೆಸ್‌ಗೆ ಹಿನ್ನಡೆಯಾಗಿರುವುದು ಪಕ್ಷಕ್ಕೆ ಆಘಾತ ತಂದಿದೆ. ಇನ್ನೊಂದೆಡೆ, ಮಾಜಿ ಸಚಿವ ಶಿವಾನಂದ ನಾಯ್ಕ ಅವರ ಬಣ ಮೇಲುಗೈ ಸಾಧಿಸುವ ಮೂಲಕ ಕ್ಷೇತ್ರದಲ್ಲಿ ತಮ್ಮ ಹಿಡಿತವನ್ನು ಸಾಬೀತುಪಡಿಸಿದೆ.

“ರಾಜ್ಯದ ಕಾಂಗ್ರೆಸ್ ಸರ್ಕಾರವು ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಅಭಿವೃದ್ಧಿ ಕಾರ್ಯಗಳನ್ನು ಸ್ಥಗಿತಗೊಳಿಸಿದೆ. ಜನರ ವಿರೋಧಿ ನೀತಿಗಳಿಗೆ ಮಂಕಿಯ ಪ್ರಜ್ಞಾವಂತ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಇದು ನಮ್ಮ ಸಿದ್ಧಾಂತ ಮತ್ತು ಅಭಿವೃದ್ಧಿ ಪರ ರಾಜಕಾರಣಕ್ಕೆ ಸಂದ ಜಯ,” ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟಿದ್ದಾರೆ.

ವಾರ್ಡ್‌ವಾರು ವಿಜೇತರ ಪಟ್ಟಿ:

ಮಡಿ 1ನೇವಾರ್ಡ್: ಜ್ಯೋತಿ ಸತೀಶ ಖಾರ್ವಿ ( ಬಿಜೆಪಿ) ದೇವರಗದ್ದೆ 407

2ನೇವಾರ್ಡ್: ಮೀನಾಕ್ಷಿ ಕೃಷ್ಣ ಹಸ್ಲರ (ಬಿಜೆಪಿ),297

ಹಳೇಮಠ 3ನೇವಾರ್ಡ್: ಆನಂದ ಗಣಪತಿ ನಾಯ್ಕ ( ಬಿಜೆಪಿ) 276

ನವಾಯತಕೇರಿ 4ನೇವಾರ್ಡ್: ರೇಷ್ಮಾ ಫರ್ನಾಂಡೀಸ್ ( ಕಾಂಗ್ರೆಸ್),

ಕಟ್ಟೆಅಂಗಡಿ 5ನೇವಾರ್ಡ್: ಮಹಮ್ಮದ್ ಸಿದ್ದಿಕ್ ಹಸನ್ ಬಾಪು (ಕಾಂಗ್ರೆಸ್),

ನಾಖುದಾಮೊಹಲ್ಲಾ 6ನೇವಾರ್ಡ್: ರಹಮತುಲ್ಲಾ ಬೊಟ್ಲೇರ (ಕಾಂಗ್ರೆಸ್),435

ಬಣಸಾಲೆ 7ನೇವಾರ್ಡ ಸವಿತಾ ಮಲ್ಲಯ್ಯ ನಾಯ್ಕ (ಬಿಜೆಪಿ),220 ದಾಸನಮಕ್ಕಿ,

8ನೇವಾರ್ಡ್: ಪೀಟರ ಎಸ್.ರೊಡ್ರಗೀಸ್ (ಬಿಜೆಪಿ)287

ಹೊಸಹಿತ್ಲ 9ನೇವಾರ್ಡ್: ಗೀತಾ ರಮಾಕಾಂತ ಹರಿಕಂತ್ರ (ಬಿಜೆಪಿ) 472

ದೊಡ್ಡಗುಂದ 10ನೇವಾರ್ಡ ಗಜಾನನ ಬಾಲಯ್ಯ ನಾಯ್ಕ (ಕಾಂಗ್ರೇಸ್) 376

ಗುಳದಕೇರಿ1-11ನೇ ಸತೀಶ ದೇವಪ್ಪ ನಾಯ್ಕ (ಬಿಜೆಪಿ) 282

ಗುಳದಕೇರಿ2- 12ನೇವಾರ್ಡ್: ಸಂಜೀವ ಗಂಗಾಧರ ನಾಯ್ಕ (ಕಾಂಗ್ರೆಸ್), 272

ಚಿತ್ತಾರ 13ನೇವಾರ್ಡ್ : ರೇಖಾ ಗಿರೀಶ ನಾಯ್ಕ (ಬಿಜೆಪಿ)548

ಗಂಜಿಗೇರಿ 14ನೇವಾರ್ಡ್: ನೇತ್ರಾವತಿ ಈಶ್ವರ ಗೌಡ (ಬಿಜೆಪಿ) 223

ಸಾರಸ್ವತಕೇರಿ 15ನೇವಾರ್ಡ್: ರವಿ ಉಮೇಶ ನಾಯ್ಕ (ಬಿಜೆಪಿ), 592

16ನೇ ವಾರ್ಡ್: ಉಲ್ಲಾಸ ಅಂಗದ ನಾಯ್ಕ (ಕಾಂಗ್ರೆಸ್), 155 :

ತಾಳಮಕ್ಕಿ 17ನೇವಾರ್ಡ್: ಉಷಾ ಕೃಷ್ಣ ನಾಯ್ಕ (ಕಾಂಗ್ರೆಸ್), 397

18ನೇವಾರ್ಡ್: ವಿಜಯಾ ಮೋಹನ ನಾಯ್ಕ (ಬಿಜೆಪಿ) ಕೊಪ್ಪದಮಕ್ಕಿ 388

19ನೇವಾರ್ಡ್: ವಿನಾಯಕ ಮೊಗೇರ (ಕಾಂಗ್ರೆಸ್), 299

20ನೇವಾರ್ಡ್: ಸವಿತಾ ಹನುಮಂತ ನಾಯ್ಕ (ಬಿಜೆಪಿ) 344

Most Read

error: Content is protected !!