Monday, November 10, 2025

ಬಿಜೆಪಿ ರಾಜಕೀಯವಾಗಿ ಯಾತ್ರೆ ಮಾಡುತ್ತಿದೆ, ಮಾಡಲಿ ಬಿಡಿ : ಸಿಎಂ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಿಜೆಪಿ ರಾಜಕೀಯವಾಗಿ ಯಾತ್ರೆ ಮಾಡುತ್ತಿದೆ, ಮಾಡಲಿ ಬಿಡಿ. ಅವರಿಗೆ ಇದರಿಂದ ರಾಜಕೀಯ ಲಾಭ ಸಿಗಲ್ಲ‌. ಎಸ್​​ಐಟಿ ಆದಾಗ ಯಾಕೆ ಬಿಜೆಪಿ ಅವರು ಯಾತ್ರೆ ಮಾಡಲಿಲ್ಲ‌? ಇದು ಡೋಂಗಿತನ ಅಲ್ವಾ? ಎಂದು ಬಿಜೆಪಿಯವರ ಧರ್ಮಸ್ಥಳ ಯಾತ್ರೆ ಕುರಿತು ಸಿಎಂ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.

ಬಿಜೆಪಿಯಿಂದ ಚಾಮುಂಡಿ ಚಲೋ ವಿಚಾರವಾಗಿ ಪ್ರತಿಕ್ರಿಯಿಸಿದರು. ಹಿಂದುತ್ವ ಗಟ್ಟಿ ಆಗುತ್ತೆ ಎಂದು ಬಿಜೆಪಿ ಈ ಯಾತ್ರೆಗಳ ಪ್ಲಾನ್ ಮಾಡುತ್ತಿದೆ. ಇವರಿಂದ ಹಿಂದುತ್ವ ಗಟ್ಟಿಯಾಗಲ್ಲ. ನಾನು ಕೂಡ ಹಿಂದೂ, ನಾವೆಲ್ಲರೂ ಕೂಡ ಹಿಂದೂ, ನಾನು ನಮ್ಮ ಊರಲ್ಲಿ ರಾಮ ಮಂದಿರ ಕಟ್ಟಿಸಿದ್ದೇನೆ. ಹಿಂದೂಗಳು ಎಂದರೆ ಸುಳ್ಳು ಹೇಳುವುದು, ಅಪಪ್ರಚಾರ ಮಾಡುವುದಲ್ಲ, ಮನುಷ್ಯತ್ವ ಇರುವವರು ಹಿಂದೂಗಳು.‌ ಅಮಾನವೀಯ ನಡವಳಿಕೆ ತೋರುವವರು ಹಿಂದೂಗಳಲ್ಲ ಎಂದರು.

ಬಿಜೆಪಿ ಅವರು ದಸರಾದಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಅವರ ಮನೆನೂ ರಾಜಕೀಯಕ್ಕೆ ಬೇಕಾದರೆ ಬಳಸಿ ಕೊಳ್ಳುತ್ತಾರೆ. ಸುಳ್ಳು ಹೇಳುವುದು ಬಿಟ್ಟು ಬಿಜೆಪಿಗೆ ಏನು ಗೊತ್ತು? ಬಿಜೆಪಿ ಹೋರಾಟದಿಂದ ದಸರಾ ಮೇಲೆ ಕೆಟ್ಟ ಪರಿಣಾಮ ಬೀರಲ್ಲ. ಹಿಂದೂಗಳೆಲ್ಲಾ ಬಿಜೆಪಿ ಜೊತೆ ಇಲ್ಲ‌ ಎಂದು ಸಿಎಂ ಹೇಳಿದರು.

error: Content is protected !!