March 19, 2026
Thursday, March 19, 2026
spot_img

ಕೇರಳ ಎಲೆಕ್ಷನ್ | ಬಿಜೆಪಿ ಎರಡನೇ ಪಟ್ಟಿ ಬಿಡುಗಡೆ: ಅಶ್ವಿನಿ ಸಹಿತ 13 ಮಹಿಳಾ ಅಭ್ಯರ್ಥಿಗಳಿಗೆ ಮಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೇರಳ ವಿಧಾನಸಭಾ ಚುನಾವಣ ಕಣ ರಂಗೇರುತ್ತಿದ್ದು, ಗುರುವಾರ ಬಿಜೆಪಿ 39 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ.

ಎರಡನೇ ಪಟ್ಟಿಯಲ್ಲಿ ಬಿಜೆಪಿ ಒಟ್ಟು 13 ಮಹಿಳಾ ಅಭ್ಯರ್ಥಿಗಳಿಗೆ ಸ್ಥಾನ ನೀಡಿದೆ. ಕಾಸರಗೋಡಿನಿಂದ ಎಮ್‌.ಎಲ್‌ ಅಶ್ವಿನಿ ಕಣಕ್ಕೆ ಇಳಿಯುತ್ತಿದ್ದರೆ, ಕುಂದರ ಕ್ಷೇತ್ರದಿಂದ ರಾಬಿನ್‌ ರಾಧಾಕೃಷ್ಣನ್‌ ಸ್ಪರ್ಧಿಸುತ್ತಿದ್ದಾರೆ. ಇನ್ನು ಗುರುವಾಯೂರ್‌ ಕ್ಷೇತ್ರದಿಂದ ಬಿ. ಗೋಪಾಲಕೃಷ್ಣನ್‌ಗೆ ಟಿಕೆಟ್‌ ನೀಡಲಾಗಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಧರ್ಮಡಂ ಕ್ಷೇತ್ರದಲ್ಲಿ ಕೆ. ರಂಜಿತ್​​ರನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿ ನೇರ ಸವಾಲು ಹಾಕಿದೆ. ಬಿಜೆಪಿಯ ಎರಡನೇ ಪಟ್ಟಿಯಲ್ಲಿ ಅನುಭವಿ ನಾಯಕರು ಹಾಗೂ ಹೊಸ ಮುಖಗಳಿಗೆ ಆದ್ಯತೆ ನೀಡಲಾಗಿದೆ.

ಎಲ್ಲೆಲ್ಲಿ ಯಾರ್ಯಾರು ಕಣಕ್ಕಿಳಿಯುತ್ತಿದ್ದಾರೆ?

ಇಲ್ಲಿದೆ ಫುಲ್ ಡಿಟೇಲ್…

ಕೇರಳ ಎಲೆಕ್ಷನ್‌ : ಬಿಜೆಪಿ ಎರಡನೇ ಪಟ್ಟಿ ಬಿಡುಗಡೆ
ಕ್ಷೇತ್ರದ ಹೆಸರುಅಭ್ಯರ್ಥಿಗಳ ಹೆಸರು
KasaragodAshwini ML
KalliasseriAV Sanil Kumar
TaliparambaN Haridas
DharmadamK Ranjith
ThalasseryO Nidheesh
KuthuparambaShijilal
MattannurBiju Elakkuzhi
KalpettaPrasanth Malavayal
KondottyP Subrahmanian
ErnadN Sreeprakash
ManjeriPathmasree M
PerinthalmannaKP Baburaj
MankadaLijoy Paul
MalappuramAshwathy Gupatha Kumar
VengaraJayakrishnan VN
VallikkunnuM Preman Master
TirurangadiRiju C Raghav
TanurDeepa Puzhakkal
TirurK Narayanan Master
ThavanurRavi Thelath
ThrithalaV Unnikrishnan Master
PattambiP Manoj
Kongad (SC)Renu Suresh
Tarur (SC)Suresh Babu
ChitturPranesh Rajendran
AlathurKV Prasanna Kumar
GuruvayoorB Gopalakrishnan
WadakkancheryTS Ullas Babu
OllurBijoy Thomas
Nattika (SC)CC Mukundan
PudukkadA Nagesh
AluvaMA Brahmaraj
ParavurVathsala Prasanna Kumar
ErnakulamPR Sivasankar
ChanganasseryB Radhakrishna Menon
AlappuzhaMJ Job
AranmulaKummanam Rajasekharan
KundaraRobin Radhakrishnan (Robin RB)
KollamN Prathap Kumar

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !