January16, 2026
Friday, January 16, 2026
spot_img

Black Salt | ಹೆಲ್ತ್​ಗೆ ಬೇಕೇಬೇಕು ಈ ಕಪ್ಪು ಉಪ್ಪು! ಇದರ ಆರೋಗ್ಯ ಪ್ರಯೋಜನಗಳು ಎಷ್ಟಿವೆ ಗೊತ್ತಾ?

ಸಾಮಾನ್ಯವಾಗಿ ಉಅಪ್ಪು ಅಡುಗೆ ಮನೆಯಲ್ಲಿ ಇದ್ದೆ ಇರುತ್ತೆ. ಅದಿಲ್ಲಾಂದ್ರೆ ಅಡುಗೆ ರುಚಿನೇ ಇರಲ್ಲ ಅಲ್ವ. ಹೆಚ್ಚಾಗಿ ನಾವು ನೀವು ಬಳಸೋದು ಒಂದಾ ಪುಡಿ ಉಪ್ಪು ಅಥವಾ ಕಲ್ಲುಪ್ಪು. ಆದ್ರೆ ನಿಮಗೆ ಕಪ್ಪು ಉಪ್ಪಿನ ಬಗ್ಗೆ ಗೊತ್ತಾ? ಹೌದು! ಕಪ್ಪು ಉಪ್ಪು ಕೂಡ ಇರುತ್ತೆ. ಅದು ಆರೋಗ್ಯಕ್ಕೆ ಎಷ್ಟು ಒಳ್ಳೇದು ಅನ್ನೋದನ್ನು ಇವತ್ತು ಈ ಲೇಖನದಲ್ಲಿ ನೋಡೋಣ.

  • ಜೀರ್ಣಕ್ರಿಯೆಗೆ ಸಹಕಾರಿ: ಕಪ್ಪು ಉಪ್ಪಿನಲ್ಲಿ ಸಲ್ಪರ್ ಮತ್ತು ಖನಿಜಾಂಶಗಳು ಇರುವುದರಿಂದ ಜೀರ್ಣಕ್ರಿಯೆ ಸರಾಗಗೊಳಿಸುತ್ತದೆ. ಊಟದ ನಂತರ ಒಂದು ಚಿಟಿಕೆ ಕಪ್ಪು ಉಪ್ಪು ತಿಂದರೆ ಹೊಟ್ಟೆ ಉಬ್ಬರ ಮತ್ತು ಅಜೀರ್ಣ ಸಮಸ್ಯೆ ಕಡಿಮೆಯಾಗುತ್ತದೆ.
  • ಅನಿಲ ಮತ್ತು ಅಜೀರ್ಣ ನಿವಾರಣೆ: ಆಯುರ್ವೇದ ಪ್ರಕಾರ, ಕಪ್ಪು ಉಪ್ಪು ಹೊಟ್ಟೆಯ ಗ್ಯಾಸ್ ತೊಂದರೆ ನಿವಾರಣೆಗೆ ಅತ್ಯುತ್ತಮ. ಇದನ್ನು ನಿಂಬೆ ರಸ ಅಥವಾ ಬೆಲ್ಲದ ಜೊತೆಗೆ ಸೇವಿಸಿದರೆ ದೇಹದ ಒಳಗಿನ ವಿಷಕಾರಿ ಅನಿಲ ಹೊರಹಾಕಲು ಸಹಕಾರಿಯಾಗುತ್ತದೆ.
  • ರಕ್ತದೊತ್ತಡ ನಿಯಂತ್ರಣ: ಸಾಮಾನ್ಯ ಉಪ್ಪಿಗಿಂತ ಕಪ್ಪು ಉಪ್ಪಿನಲ್ಲಿ ಸೋಡಿಯಂ ಪ್ರಮಾಣ ಕಡಿಮೆ ಇರುತ್ತದೆ. ಹೀಗಾಗಿ ಹೈಬಿಪಿ (High BP) ಇರುವವರು ಇದನ್ನು ಮಿತವಾಗಿ ಸೇವಿಸಿದರೆ ರಕ್ತದೊತ್ತಡ ನಿಯಂತ್ರಣದಲ್ಲಿ ಇರಬಹುದು.
  • ಉಸಿರಾಟದ ಸಮಸ್ಯೆಗೆ ಸಹಾಯಕ: ಕಪ್ಪು ಉಪ್ಪನ್ನು ನೀರಿನಲ್ಲಿ ಕರಗಿ ಬಾಯಿ ಮುಕ್ಕಳಿಸಿದರೆ ಗಂಟಲು ನೋವು ಮತ್ತು ಶೀತದಿಂದ ಉಂಟಾಗುವ ಉಸಿರಾಟದ ಸಮಸ್ಯೆ ತಗ್ಗುತ್ತದೆ.(Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

Must Read

error: Content is protected !!