Saturday, October 25, 2025

ಗಾಜಾದ ಬೀದಿಗಳಲ್ಲಿ ರಕ್ತದೋಕುಳಿ: ‘ಅಲ್ಲಾಹು ಅಕ್ಬರ್’ ಘೋಷಗಳ ಮಧ್ಯೆ 8 ಜನರ ಕ್ರೂರ ಹತ್ಯೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಮಾಸ್ ಗುಂಪನ್ನು ನಿಶ್ಯಸ್ತ್ರಗೊಳಿಸುವ ಪ್ರತಿಜ್ಞೆ ಮಾಡಿದರೂ, ಹಮಾಸ್ ತನ್ನ ಹಿಡಿತವನ್ನು ಬಿಗಿಗೊಳಿಸುವ ಭೀಕರ ಪ್ರಯತ್ನದಲ್ಲಿ ಗಾಜಾ ಪಟ್ಟಿಯಲ್ಲಿ ಸಾಮೂಹಿಕ ಮತ್ತು ಸಾರ್ವಜನಿಕ ಮರಣದಂಡನೆಗಳನ್ನು ನಡೆಸಿದೆ.

ಟ್ರಂಪ್ ಅವರ ‘ನಿಶ್ಯಸ್ತ್ರೀಕರಣ’ ಎಚ್ಚರಿಕೆಯ ನಂತರವೂ, ಹಮಾಸ್ ಶಂಕಿತ ಎಂಟು ಗಾಜಾ ನಿವಾಸಿಗಳನ್ನು ಕ್ರೂರವಾಗಿ ಹತ್ಯೆ ಮಾಡಿದೆ. ಈ ಜನರನ್ನು ಹಿಂಬದಿಗೆ ಕೈ ಕಟ್ಟಿ, ಕಣ್ಣಿಗೆ ಬಟ್ಟೆ ಕಟ್ಟಿ, ನಂತರ ಗಾಜಾದ ನಡುಬೀದಿಯಲ್ಲೇ ಗುಂಡಿಕ್ಕಿ ಕೊಲ್ಲಲಾಗಿದೆ.

ಅಮೆರಿಕದ ಮಧ್ಯಸ್ಥಿಕೆಯೊಂದಿಗೆ ಇಸ್ರೇಲ್ ಜೊತೆ ಕದನ ವಿರಾಮಕ್ಕೆ ಸಹಿ ಹಾಕಿದ್ದರೂ, ಗಾಜಾ ಪಟ್ಟಿಯ ಮೇಲೆ ತನ್ನ ನಿಯಂತ್ರಣವನ್ನು ಉಳಿಸಿಕೊಳ್ಳಲು ಹಮಾಸ್ ಇತರ ಸಶಸ್ತ್ರ ಪ್ಯಾಲೇಸ್ಟಿನಿಯನ್ ಬಣಗಳೊಂದಿಗೆ ಘರ್ಷಣೆ ನಡೆಸುತ್ತಿದೆ. ಈ ಭೀಕರ ಪ್ರತೀಕಾರದ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಹಮಾಸ್ ಉಗ್ರರು ಬಂದೂಕುಗಳನ್ನು ಹಿಡಿದು ಸಾರ್ವಜನಿಕವಾಗಿ ಸಾಮೂಹಿಕ ಮರಣದಂಡನೆ ನಡೆಸುವ ದೃಶ್ಯಗಳಿವೆ.

ಮೃತದೇಹಗಳ ಸುತ್ತಲೂ ನಿಂತಿದ್ದ ಜನರು ‘ಅಲ್ಲಾಹು ಅಕ್ಬರ್’ ಎಂಬ ಘೋಷಣೆಗಳನ್ನು ಕೂಗುತ್ತಿರುವುದು ಈ ಸಂಚಲನ ಮೂಡಿಸಿದ ವಿಡಿಯೋದಲ್ಲಿದೆ. ಈ ಸಾರ್ವಜನಿಕ ಕ್ರೌರ್ಯವು ಗಾಜಾದಲ್ಲಿ ಹಮಾಸ್‌ನ ಅಧಿಕಾರವನ್ನು ಮತ್ತೊಮ್ಮೆ ದೃಢಪಡಿಸಿದೆ ಮತ್ತು ಅದರ ಎದುರಾಳಿಗಳಿಗೆ ಸ್ಪಷ್ಟವಾದ ಎಚ್ಚರಿಕೆಯನ್ನು ರವಾನಿಸಿದೆ.

error: Content is protected !!