April 13, 2026
Monday, April 13, 2026
spot_img

SHOCKING | ಬಿರಿಯಾನಿ ಅಂಗಡಿಯ ಫ್ರೀಝರ್‌ನಲ್ಲಿ ಮೃತದೇಹ ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಉತ್ತರ ಪ್ರದೇಶದ ಲಕ್ನೋದ ಬಿರಿಯಾನಿ ಅಂಗಡಿಯ ಫ್ರಿಡ್ಜ್‌ನಲ್ಲಿ ಮೃತದೇಹ ಪತ್ತೆಯಾಗಿದೆ. ಇಡೀ ಲಕ್ನೋ ಈ ಘಟನೆ ನೋಡಿ ಬೆಚ್ಚಿಬಿದ್ದಿದೆ.

ಜಿಸಿಆರ್‌ಜಿ ಕಾಲೇಜು ಗೇಟ್‌ನ ಎದುರಿನ ಅಂಗಡಿ ಇರುವ ಬಕ್ಷಿ ಕಾ ತಲಾಬ್ ಪ್ರದೇಶದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಆದರೆ ಮೃತ ವ್ಯಕ್ತಿಯನ್ನು ಯಾರೆಂದು ಇನ್ನೂ ಗುರುತಿಸಲಾಗಿಲ್ಲ.

ಅಂಗಡಿ ಮಾಲೀಕರೊಬ್ಬರು ತಮ್ಮ ತಂದೆಯ ಅಂತ್ಯಕ್ರಿಯೆ ಸಲುವಾಗಿ ಅಂಗಡಿಯನ್ನು ಕೆಲವು ದಿನಗಳವರೆಗೆ ಮುಚ್ಚಿದ್ದರು. ಆದರೆ ನಾಲ್ಕು ದಿನಗಳ ನಂತರ ಅವರು ಹಿಂತಿರುಗಿ ಅಂಗಡಿ ತೆರೆದಾಗ, ಅವರು ತಮ್ಮ ದಿನಚರಿಯ ಭಾಗವಾಗಿ ಫ್ರೀಜರ್ ಅನ್ನು ಪರಿಶೀಲಿಸಿದ್ದಾರೆ. ಆದರೆ ಡೀಪ್ ಫ್ರೀಜರ್‌ನಲ್ಲಿ ಅಪರಿಚಿತ ಯುವಕನ ಶವ ಪತ್ತೆಯಾಗಿದ್ದು, ಅಲ್ಲಿದ್ದ ಜನರಲ್ಲಿ ಆತಂಕ ಸೃಷ್ಟಿಸಿದೆ‌.

ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಯುವಕ ಮೃತಪಟ್ಟಿದ್ದು ಹೇಗೆ? ಆತನ ಮೃತದೇಹ ಫ್ರಿಡ್ಜ್‌ ಸೇರಿದ್ದು ಹೇಗೆ? ಸೇರಿಸಿದ್ದು ಯಾರು ಎನ್ನುವ ಮಾಹಿತಿಯನ್ನು ಕಲೆಹಾಕಲಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !