ಹೊಸದಿಗಂತ ವರದಿ ವಿಜಯಪುರ:
ಜಿಲ್ಲೆಯ ಆಲಮೇಲ ತಾಲೂಕಿನ ತಾರಾಪೂರ ಗ್ರಾಮದ ಬಳಿ ಅಪಘಾತದ ಸ್ಥಿತಿಯಲ್ಲಿ ರಸ್ತೆ ಪಕ್ಕ ಗ್ರಾಮ ಪಂಚಾಯಿತಿ ಸದಸ್ಯನ ಶವ ಪತ್ತೆಯಾಗಿದ್ದು, ಹಲವು ಅನುಮಾನಕ್ಕೆ ಎಡೆಯಾಗಿದೆ.
ಸಂತೋಷ ಬಿರಾದಾರ (36) ಮೃತಪಟ್ಟ ಗ್ರಾಪಂ ಸದಸ್ಯ.
ತಾರಾಪೂರ ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ ಬಿರಾದಾರ ಈತ ಬೈಕ್ ಮೇಲಿಂದ ಬಿದ್ದ ಸ್ಥಿತಿಯಲ್ಲಿದ್ದು, ತಲೆಗೆ ಏಟು ಬಿದ್ದು ರಕ್ತಸ್ರಾವವಾಗಿದೆ. ಇದು ಅಪಘಾತವೋ ?, ಕೊಲೆಯೋ ? ಎಂಬುವುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದ್ದು, ಸ್ಥಳಕ್ಕೆ ಆಲಮೇಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆಲಮೇಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

