February 7, 2026
Saturday, February 7, 2026
spot_img

ಆರ್‌ಎಸ್‌ಎಸ್ ಶತಮಾನೋತ್ಸವದ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್,ರಣಬೀರ್ ಕಪೂರ್ ಭಾಗಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್: :

ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ತನ್ನ 100ನೇ ವರ್ಷದ ಸಂಭ್ರಮವನ್ನು ಆಚರಿಸುತ್ತಿದೆ. ಈ ಹಿನ್ನೆಲೆ ಮುಂಬೈನಲ್ಲಿ ಶತಮಾನೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿದೆ. ನೆಹರೂ ಕೇಂದ್ರದಲ್ಲಿ ‘ನವೇ ಕ್ಷಿತಿಜ್’ ಉಪನ್ಯಾಸ ಮಾಲೆ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಇಂದು ಬಾಲಿವುಡ್‌ನ ಭಾಯ್‌ಜಾನ್ ಸಲ್ಮಾನ್ ಖಾನ್ ಆಗಮಿಸಿದ್ದಾರೆ.

ಬಾಲಿವುಡ್ ನ ಮತ್ತೋರ್ವ ನಟ ರಣಬೀರ್ ಕಪೂರ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

‘ನವೇ ಕ್ಷಿತಿಜ್’ ಹೆಸರಿನ ಉಪನ್ಯಾಸ ಸರಣಿಯನ್ನು ಸರಸಂಘಚಾಲಕರಾದ ಮೋಹನ್ ಭಾಗವತ್ ಉದ್ಘಾಟಿಸಿದರು. ಎರಡು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸಮಾಜ, ಸಂಸ್ಕೃತಿ, ಇತಿಹಾಸ, ಯುವಜನತೆ ಹಾಗೂ ರಾಷ್ಟ್ರಾಭಿವೃದ್ಧಿ ಕುರಿತಂತೆ ಉಪನ್ಯಾಸಗಳು ಇರಲಿವೆ. ನಾಳೆ ಪ್ರಶ್ನೋತ್ತರ ವೇಳೆಯನ್ನೂ ಆಯೋಜಿಸಲಾಗಿದ್ದು, ಆಹ್ವಾನಿತ ಗಣ್ಯರಿಗೆ ನೇರವಾಗಿ ಪ್ರಶ್ನೆ ಮಾಡುವ ಅವಕಾಶ ಕಲ್ಪಿಸಲಾಗಿದೆ. ಸುಮಾರು 900 ಮಂದಿ ಸೆಲೆಬ್ರಿಟಿಗಳು, ಕ್ರೀಡಾಪಟುಗಳು, ಕಲಾವಿದರು ಹಾಗೂ ವಿವಿಧ ವೃತ್ತಿಪರರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !