ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರವಾಹ ಪೀಡಿದ ಪಂಜಾಬ್ ನೆರವಿಗೆ ಎಲ್ಲರೂ ಕೈ ಜೋಡಿಸಿ ಎಂದು ಬಾಲಿವುಡ್ ಸೆಲೆಬ್ರಿಟಿಗಳು ಮನವಿ ಮಾಡಿದ್ದಾರೆ.
ಸದ್ಯ ಟ್ವಿಟರ್‌ನಲ್ಲಿ ಪಂಜಾಬ್ ಫ್ಲಡ್ಸ್ ಹ್ಯಾಷ್‌ಟ್ಯಾಗ್ ಹೆಚ್ಚು ಬಳಕೆಯಾಗುತ್ತಿದೆ. ಪಂಜಾಬ್‌ನಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಎದುರಾಗಿದೆ.
ಈ ಪರಿಸ್ಥಿತಿಯಲ್ಲಿ ಜನರ ಜೊತೆ ನಾವಿದ್ದೇವೆ ನೀವೂ ಕೈ ಜೋಡಿಸಿ ಎಂದು ಬಾಲಿವುಡ್ ಸೆಲೆಬ್ರಿಟಿಗಳಾದ ಶಾರುಖ್ ಖಾನ್, ಆಲಿಯಾ ಭಟ್, ರಣದೀಪ್ ಹುಡಾ, ಕರಣ್ ಜೋಹರ್ ಸೇರಿ ಎಲ್ಲರೂ ಮನವಿ ಮಾಡಿದ್ದಾರೆ.
ಈಗಾಗಲೇ ಪಂಜಾಬ್ ಮಳೆಯಿಂದಾಗಿ ಮೂವತ್ತಕ್ಕೂ ಹೆಚ್ಚು ಮಂದಿ ಜೀವ ತೆತ್ತಿದ್ದಾರೆ. ಮೂರು ಲಕ್ಷಕ್ಕೂ ಹೆಚ್ಚು ಮಂದಿಗೆ ತಲೆ ಮೇಲೆ ಸೂರು ಇಲ್ಲದಂತಾಗಿದೆ.