Thursday, January 29, 2026
Thursday, January 29, 2026
spot_img

ದೆಹಲಿ ಖಾಸಗಿ ಶಾಲೆ, ಪಂಜಾಬ್-ಹರಿಯಾಣ ಸಚಿವಾಲಯಕ್ಕೆ ಬಾಂಬ್ ಬೆದರಿಕೆ: ಪರಿಶೀಲನೆ ನಡೆಸಿದ ಪೊಲೀಸರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರೀಯ ರಾಜಧಾನಿ ದೆಹಲಿಯ ನಾಲ್ಕು ಖಾಸಗಿ ಶಾಲೆಗಳಿಗೆ ಬೆಳಿಗ್ಗೆ ಬಾಂಬ್ ಬೆದರಿಕೆಗಳು ಬಂದಿದೆ. ಪಂಜಾಬ್-ಹರಿಯಾಣ ಸಚಿವಾಲಯಕ್ಕೂ ಇ-ಮೇಲ್ ಮೂಲಕ ಬೆದರಿಕೆ ಬಂದಿದೆ. ಪೊಲೀಸ್ ತಂಡಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರೂ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ.

ಲಾರೆಟೋ ಕಾನ್ವೆಂಟ್ ಶಾಲೆಗೆ ಬೆಳಿಗ್ಗೆ 8:22ಕ್ಕೆ, ಡಾನ್ ಬಾಸ್ಕೊ ಶಾಲೆಗೆ 9:18ಕ್ಕೆ, ಕಾರ್ಮೆಲ್ ಶಾಲೆ (ಆನಂದ್ ನಿಕೇತನ್) 9:22ಕ್ಕೆ ಮತ್ತು ದ್ವಾರಕಾ ಕಾರ್ಮೆಲ್ ಶಾಲೆಗೆ 9:25ಕ್ಕೆ ಬೆದರಿಕೆ ಕರೆಗಳುಬಂದಿವೆ.

ಇದನ್ನೂ ಓದಿ:

ಇದಕ್ಕೂ ಮುನ್ನ, ಬುಧವಾರ ಚಂಡೀಗಢ, ಗುರುಗ್ರಾಮ್ ಮತ್ತು ಹರಿಯಾಣದ ಇತರೆ ಪ್ರದೇಶಗಳಲ್ಲಿಯೂ ಹಲವು ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆಗಳು ಬಂದಿದ್ದು, ವಿದ್ಯಾರ್ಥಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಪರಿಶೀಲನೆ ನಡೆಸಲಾಗಿತ್ತು.

ಈ ಘಟನೆ ದೇಶದ ಶಾಲಾ ಸುರಕ್ಷತೆಯನ್ನು ಕುರಿತು ಆತಂಕವನ್ನು ಹೆಚ್ಚಿಸಿದೆ. ಎಲ್ಲಾ ಶಾಲೆಗಳ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಸುರಕ್ಷತೆ ಖಚಿತಪಡಿಸಲು ಹೆಚ್ಚಿನ ಭದ್ರತಾ ಕ್ರಮಗಳನ್ನು ಜಾರಿಗೊಳಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !