Friday, January 2, 2026

ಬಾಂಬ್, ಕಲ್ಲು, ಬುಲೆಟ್… ಬ್ಯಾನರ್ ಗಲಾಟೆ ಹಿಂದೆ ದೊಡ್ಡ ಸಂಚು? ಸಿಬಿಐ ತನಿಖೆಗೆ ಒತ್ತಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬ್ಯಾನರ್ ಅಳವಡಿಕೆ ವಿಚಾರವಾಗಿ ನಡೆದ ರಣಾಂಗಣದಂತಹ ಘರ್ಷಣೆಗೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಇಂದು ಮಾಧ್ಯಮಗಳ ಮುಂದೆ ಸ್ಫೋಟಕ ಮಾಹಿತಿಯೊಂದನ್ನು ಬಿಚ್ಚಿಟ್ಟಿದ್ದಾರೆ. ತಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಕೇಳಿಬಂದಿರುವ ಗೂಂಡಾಗಿರಿಯ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ ಅವರು, ಇದು ವ್ಯವಸ್ಥಿತವಾಗಿ ನಡೆದ ಸಂಚು ಎಂದು ದೂರಿದ್ದಾರೆ.

“ನಮ್ಮ ಕಾರ್ಯಕರ್ತರು ಯಾವುದೇ ತಪ್ಪು ಮಾಡಿಲ್ಲ. ವಿರೋಧಿಗಳೇ ಸಂಚು ರೂಪಿಸಿ ಮೊದಲೇ ಪೆಟ್ರೋಲ್ ಬಾಂಬ್‌ಗಳನ್ನು ಸಿದ್ಧಪಡಿಸಿಕೊಂಡು ಬಂದಿದ್ದರು. ಅಲ್ಲದೆ, ಸ್ಥಳದಲ್ಲಿ ಭೀಕರ ಕಲ್ಲು ತೂರಾಟ ನಡೆಸಿದ್ದಾರೆ,” ಎಂದು ಅವರು ಕಿಡಿಕಾರಿದ್ದಾರೆ.

ಸಂಘರ್ಷದ ವೇಳೆ ಗುಂಡಿನ ದಾಳಿ ನಡೆದಿದ್ದು ನಿಜ, ಆದರೆ ಅದನ್ನು ಮಾಡಿದ್ದು ಅವರೇ ಎಂದು ಶ್ರೀರಾಮುಲು ಆರೋಪಿಸಿದ್ದಾರೆ. “ಸತೀಶ್ ರೆಡ್ಡಿ ಅವರ ಬೆಂಬಲಿಗರು ಮತ್ತು ಅಂಗರಕ್ಷಕರೇ ಗುಂಡು ಹಾರಿಸಿದ್ದಾರೆ. ಈ ಬಗ್ಗೆ ನಮ್ಮ ಬಳಿ ಬಲವಾದ ಸಾಕ್ಷಿಗಳಿವೆ,” ಎಂದಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ತಮ್ಮ ವಾದವನ್ನು ಪುಷ್ಠೀಕರಿಸಲು ಶ್ರೀರಾಮುಲು ಅವರು ಮಾಧ್ಯಮಗಳಿಗೆ ಸ್ಫೋಟಕ ವಿಡಿಯೋ ಸಾಕ್ಷ್ಯವೊಂದನ್ನು ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ಘಟನೆಯ ಸತ್ಯಾಸತ್ಯತೆ ಅಡಗಿದೆ ಎಂಬುದು ಅವರ ವಾದ.

ಘಟನೆಯ ಗಂಭೀರತೆಯನ್ನು ಪರಿಗಣಿಸಿ, ಕೂಡಲೇ ಸಿಟ್ಟಿಂಗ್ ಹೈಕೋರ್ಟ್ ನ್ಯಾಯಾಧೀಶರಿಂದ ಅಥವಾ ಸಿಬಿಐನಿಂದ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

error: Content is protected !!