Friday, January 9, 2026

ಬಾಕ್ಸ್‌ ಆಫೀಸ್‌ ನಲ್ಲಿ ʻಮಾರ್ಕ್ʼ ಅಬ್ಬರ: ಎರಡು ವಾರಕ್ಕೆ ‌ಕಿಚ್ಚ ಸುದೀಪ್‌ ಸಿನಿಮಾ ಗಳಿಸಿದ್ದು ಎಷ್ಟು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಿಚ್ಚ ಸುದೀಪ್ ಅಭಿನಯದ ʻಮಾರ್ಕ್ʼ ಸಿನಿಮಾವು ರಿಲೀಸ್ ಆಗಿ ಮೂರನೇ ವಾರಕ್ಕೆ ಕಾಲಿಟ್ಟಿದೆ. ಸದ್ಯ ಮೊದಲ ಎರಡು ವಾರಗಳಿಗೆ ಈ ಸಿನಿಮಾ ಎಷ್ಟು ಗಳಿಕೆ ಮಾಡಿದೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿದ್ದು, ಸದ್ಯ ಮಾರ್ಕ್‌ ಚಿತ್ರದ ಎರಡು ವಾರಗಳ ಗಳಿಕೆ ಎಷ್ಟು ಎಂಬುದಕ್ಕೆ ಚಿತ್ರತಂಡದ ಮೂಲಗಳು ಮಾಹಿತಿ ನೀಡಿವೆ.

ಮೂಲಗಳ ಪ್ರಕಾರ, ಮಾರ್ಕ್‌ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ 50 ಕೋಟಿ ರೂ. ಕ್ರಾಸ್‌ ಮಾಡಿದೆ. 2 ವಾರಗಳಲ್ಲಿ ಈ ಸಿನಿಮಾವು ಸುಮಾರು 51.30 ಕೋಟಿ ರೂಪಾಯಿಗಳನ್ನು ಗಳಿಸಿದೆ ಎಂಬ ಮಾತು ಚಿತ್ರತಂಡದ ಮೂಲಗಳಿಂದ ಕೇಳಬಂದಿದೆ.

ಮ್ಯಾಕ್ಸ್‌ ನಂತರ ಸುದೀಪ್‌ ಮತ್ತು ವಿಜಯ್‌ ಕಾರ್ತಿಕೇಯನ್‌ ಅವರ ಕಾಂಬಿನೇಷನ್‌ ವರ್ಕ್‌ ಆಗಿದೆ ಎಂದೇ ಹೇಳಬಹುದು. ಸತ್ಯಜ್ಯೋತಿ ಫಿಲ್ಮ್ಸ್‌ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಹಲವು ವರ್ಷಗಳ ನಂತರ ಸ್ಯಾಂಡಲ್‌ವುಡ್‌ಗೆ ಈ ಸಂಸ್ಥೆ ಕಮ್‌ ಬ್ಯಾಕ್‌ ಮಾಡಿತ್ತು.

ಮಾರ್ಕ್‌ ಸಿನಿಮಾ ಇತ್ತ ಮಾಸ್ ಪ್ರೇಕ್ಷಕರಿಗೂ ಅತ್ತ ಫ್ಯಾಮಿಲಿ ಆಡಿಯನ್ಸ್‌ಗೆ ಇಷ್ಟವಾಗಿತ್ತು. ಈ ಸಿನಿಮಾವು 3ನೇ ವಾರಕ್ಕೆ ಕಾಲಿಟ್ಟರೂ ಚಿತ್ರದ ವೇಗ ಕುಗ್ಗಿಲ್ಲ. ಬೆಂಗಳೂರಿನಲ್ಲಿ ಈಗಳು ಈ ಸಿನಿಮಾಗೆ 250+ ಶೋಗಳು ಸಿಕ್ಕಿವೆ.

ಮಾರ್ಕ್‌ ಸಿನಮಾದಲ್ಲಿ ಸುದೀಪ್‌ ಅವರ ಜೊತೆಗೆ ರೋಶಿಣಿ ಪ್ರಕಾಶ್‌, ಅರ್ಚನಾ ಕೊಟ್ಟಿಗೆ, ನವೀನ್‌ ಚಂದ್ರ, ಪ್ರತಾಪ್‌ ನಾರಾಯಣ್‌, ರಘು ರಾಮನಕೊಪ್ಪ, ಗೋಪಾಲ್‌ ಕೃಷ್ಣ ದೇಶಪಾಂಡೆ ಹಾಗೂ ತಮಿಳು ನಟರಾದ ವಿಕ್ರಾಂತ್‌, ಗುರು ಸೋಮಸುಂದರಂ, ದೀಪ್ಶಿಕಾ, ಯೋಗಿ ಬಾಬು ಮುಂತಅದವರು ನಟಿಸಿದ್ದರು. ಅಜನೀಶ್‌ ಲೋಕನಾಥ್‌ ಅವರ ಸಂಗೀತ ಈ ಚಿತ್ರಕ್ಕಿತ್ತು. ಶೇಖರ್‌ ಚಂದ್ರ ಅವರು ಛಾಯಾಗ್ರಹಣ ಮಾಡಿದ್ದು, ಅದ್ದೂರಿಯಾಗಿ ನಿರ್ಮಾಣ ಮಾಡಲಾಗಿತ್ತು.

error: Content is protected !!