January16, 2026
Friday, January 16, 2026
spot_img

ಎಚ್​ಐವಿಯಿಂದ ಮೃತಪಟ್ಟ ತಾಯಿಯ ಶವದ ಬಳಿ ಕುಳಿತು ಬಾಲಕನ ಕಣ್ಣೀರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಎಚ್​ಐವಿಯಿಂದ ಮೃತಪಟ್ಟ ತಾಯಿಯ ಶವವದೆದುರು ಒಂಟಿಯಾಗಿ ಕುಳಿತು ಬಾಲಕ ಅಳುತ್ತಿದ್ದ ಘಟನೆ ಉತ್ತರ ಪ್ರದೇಶದ ಎಟಾದಲ್ಲಿ ನಡೆದಿದೆ. ತಂದೆ ಕೂಡ ಏಡ್ಸ್​ನಿಂದ ಸಾವನ್ನಪ್ಪಿದ್ದರು ಆಗಲೂ ಕೂಡ ನಮ್ಮ ಜತೆ ಯಾರೂ ಇರಲಿಲ್ಲ, ಈಗ ತಾಯಿಯನ್ನೂ ಕಳೆದುಕೊಂಡು ಒಂಟಿಯಾಗಿದ್ದೇನೆಂದು 10 ವರ್ಷದ ಬಾಲಕ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ.

ಗುರುವಾರ ಬೆಳಗ್ಗೆ ಆತ ತಾಯಿಯನ್ನು ಕಳೆದುಕೊಂಡಿದ್ದಾನೆ. ಎಟಾ ವೈದ್ಯಕೀಯ ಕಾಲೇಜಿನಲ್ಲಿ ಎಚ್ಐವಿ ಮತ್ತು ಏಡ್ಸ್ ಚಿಕಿತ್ಸೆ ಪಡೆಯುತ್ತಿದ್ದ ಆಕೆ ಕೊನೆಯುಸಿರೆಳೆದಿದ್ದಾರೆ. ಕಳೆದ ವರ್ಷ ಇದೇ ಕಾಯಿಲೆಯಿಂದ ತನ್ನ ತಂದೆಯನ್ನು ಕಳೆದುಕೊಂಡಿದ್ದಾಗಿ ಬಾಲಕ ಹೇಳಿದ್ದಾನೆ.

ಸಾಕಷ್ಟು ಪ್ರಯತ್ನಗಳ ಹೊರತಾಗಿಯೂ ತಾಯಿಯನ್ನು ಉಳಿಸಿಕೊಳ್ಳಲು ಸಾರ್ಧಯವಾಗಿಲ್ಲ, ಮರಣೋತ್ತರ ಪರೀಕ್ಷೆ ನಡೆಸಿರುವ ಕೋಣೆಯಲ್ಲಿ ತಾಯಿಯ ಶವದ ಪಕ್ಕ ಕುಳಿತು ತನ್ನ ದುಃಖ ತೋಡಿಕೊಂಡಿದ್ದಾನೆ.

ಅಪ್ಪನಿಗೆ ಏಡ್ಸ್​ ಬಂದಾಗ ನೆಂಟಿರಿಷ್ಟರೆಲ್ಲಾ ನಮ್ಮ ಜತೆ ಮಾತನಾಡುವುದನ್ನೇ ನಿಲ್ಲಿಸಿದ್ದರು, ಅಧಿಕಾರಿಗಳು ಬರುವವರೆಗೂ ಅಲ್ಲಿಂದ ಬಾಲಕ ಹೊರಟಿರಲಿಲ್ಲ ಎಂದು ಸಿಬ್ಬಂದಿ ಹೇಳಿದ್ದಾರೆ.

ಪತಿ ಮತ್ತು ಮಕ್ಕಳೊಂದಿಗೆ ವಾಸಿಸುತ್ತಿದ್ದ 45 ವರ್ಷದ ಮಹಿಳೆ ಒಂದು ವರ್ಷದ ಹಿಂದೆ ಎಚ್‌ಐವಿ ಸೋಂಕಿನಿಂದಾಗಿ ತನ್ನ ಗಂಡನನ್ನು ಕಳೆದುಕೊಂಡಿದ್ದರು. ಅಂದಿನಿಂದ, ಆ ಮಹಿಳೆ ಕೂಡ ಅನಾರೋಗ್ಯದಿಂದ ಬಳಲುತ್ತಿದ್ದರು, ಮತ್ತು ಇದರಿಂದಾಗಿ ಅವರು ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

Must Read

error: Content is protected !!