February 2, 2026
Monday, February 2, 2026
spot_img

SHOCKING | ಮೋಮೊಗಾಗಿ 85 ಲಕ್ಷ ರೂ. ಮೌಲ್ಯದ ಆಭರಣ ನೀಡಿದ ಬಾಲಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮೋಮೊ ಅಂಗಡಿಯ ಯುವಕರು ಬಾಲಕನೊಬ್ಬನ ವಿಶ್ವಾಸ ಗಳಿಸಿ, ಮೋಮೋ ತಿನ್ನಿಸಿ ಲಕ್ಷಾಂತರ ರೂಪಾಯಿಯ ಆಭರಣಗಳನ್ನು ವಂಚನೆ ಮಾಡಿರುವ ಘಟನೆ ಉತ್ತರ ಪ್ರದೇಶದ ದಿಯೋರಿಯಾದಲ್ಲಿ ನಡೆದಿದೆ.

ಕಸ್ಯ ರಸ್ತೆಯ ದುಮ್ರಿ ಚೌರಾಹಾದಲ್ಲಿ ಮೊಮೊ ಅಂಗಡಿ ನಡೆಸುವ ಯುವಕರು ನಮ್ಮ ಮನೆಯಲ್ಲಿದ್ದ 85 ಲಕ್ಷ ರೂಪಾಯಿ ಮೌಲ್ಯದ ಆಭರಣಗಳ ಜತೆ ಪರಾರಿಯಾಗಿದ್ದಾರೆ ಎಂದ ಬಾಲಕನ ತಂದೆ ದೂರು ನೀಡಿದ್ದಾರೆ.

ಎಷ್ಟು ಬೇಕಾದರೂ ಮೋಮೊ ನೀಡುತ್ತೇವೆ, ಹಣವಿಲ್ಲದೆ ಹೋದರೆ ಮನೆಯಲ್ಲಿರುವ ಬಂಗಾರ ತೆಗೆದುಕೊಂಡು ಬಾ ಎಂದು ಯುವಕರು ಬಾಲಕನ ತಲೆಗೆ ಐಡಿಯಾ ನೀಡಿದ್ದಾರೆ. ಬಾಲಕ ಮನೆಯಲ್ಲಿದ್ದ ಆಭರಣಗಳನ್ನು ನೀಡಿ ಮೋಮೊ ತಿಂದಿದ್ದಾನೆ.

ಮನೆಯಲ್ಲಿ ಕಬೋರ್ಡ್‌ ತೆಗೆದ ಪೋಷಕರಿಗೆ ಖಾಲಿ ಜಾಗ ನೋಡಿ ಶಾಕ್‌ ಆಗಿದೆ. ನಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಮೋಮೋ ಅಂಗಡಿ ಯುವಕರು ಏಳನೇ ತರಗತಿ ವಿದ್ಯಾರ್ಥಿಯೊಂದಿಗೆ ಸ್ನೇಹ ಬೆಳೆಸಿ ಆತನಿಂದ ಈ ಕೆಲಸ ಮಾಡಿಸಿಕೊಂಡಿದ್ದಾರೆ.

ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !