ಡೇಟಿಂಗ್ ಅನ್ನೋದು ಕೇವಲ ಮಾತನಾಡೋದು, ಹೊರಗೆ ಸುತ್ತಾಡೋದು ಅಷ್ಟೇ ಅಲ್ಲ. ಅದು ಇಬ್ಬರ ಭಾವನೆ, ನಂಬಿಕೆ ಮತ್ತು ಭವಿಷ್ಯದ ನಿರ್ಧಾರಗಳ ಜೊತೆಗೂ ಸಂಬಂಧಿಸಿದೆ. ಒಂದು ಸಣ್ಣ ಅಜಾಗರೂಕತೆ ಮುಂದಿನ ದಿನಗಳಲ್ಲಿ ದೊಡ್ಡ ಗೊಂದಲಕ್ಕೆ ಕಾರಣವಾಗಬಹುದು. ಹೀಗಾಗಿ ಡೇಟಿಂಗ್ ಆರಂಭಿಸುವ ಮೊದಲು ಹುಡುಗ–ಹುಡುಗಿಯರು ಕೆಲವು ಮುಖ್ಯ ವಿಷಯಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದು ಬಹಳ ಅಗತ್ಯ.
- ನಿಮ್ಮ ಗುರಿ ಸ್ಪಷ್ಟವಾಗಿರಲಿ: ನೀವು ಡೇಟಿಂಗ್ ಅನ್ನು ಸಮಯ ಕಳೆಯಲು ಮಾಡುತ್ತಿದ್ದೀರಾ ಅಥವಾ ಗಂಭೀರ ಸಂಬಂಧಕ್ಕಾಗಿ ಮಾಡುತ್ತಿದ್ದೀರಾ ಅನ್ನೋದನ್ನು ಮೊದಲು ನಿಮಗೆ ನೀವೇ ಸ್ಪಷ್ಟವಾಗಿ ತಿಳಿದುಕೊಳ್ಳಿ.
- ಗೌಪ್ಯತೆಗೆ ಗೌರವ ನೀಡಿ: ಫೋನ್, ಸೋಶಿಯಲ್ ಮೀಡಿಯಾ, ಸ್ನೇಹಿತರ ಬಗ್ಗೆ ಅತಿಯಾದ ಕುತೂಹಲ ತೋರಿಸುವುದು ನಂಬಿಕೆಗೆ ಧಕ್ಕೆ ತರಬಹುದು.
- ಭಾವನಾತ್ಮಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳಿ: ನೀವು ಮಾನಸಿಕವಾಗಿ ಸಿದ್ಧರಿಲ್ಲದಿದ್ದರೆ, ಸಂಬಂಧದಲ್ಲಿ ಒತ್ತಡ ಹೆಚ್ಚಾಗುವ ಸಾಧ್ಯತೆ ಹೆಚ್ಚು.
- ಹಣ ಮತ್ತು ಅಭ್ಯಾಸಗಳ ಬಗ್ಗೆ ಮುಕ್ತವಾಗಿ ಮಾತನಾಡಿ: ಆಡಂಬರ, ಖರ್ಚು, ಜೀವನಶೈಲಿ ಬಗ್ಗೆ ಮೊದಲೇ ಮಾತನಾಡಿದರೆ ಮುಂದೆ ತಪ್ಪು ನಿರ್ಧಾರಗಳನ್ನು ತಡೆಯಬಹುದು.
- ನಿಮ್ಮ ಮಿತಿಗಳನ್ನು ನೀವೇ ನಿಗದಿ ಮಾಡಿ: ಯಾವ ವಿಷಯಗಳಿಗೆ ಒತ್ತಡಕ್ಕೆ ಒಪ್ಪದೇ, ನಿಮ್ಮ ಮೌಲ್ಯಗಳನ್ನು ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯ.

