Sunday, January 25, 2026
Sunday, January 25, 2026
spot_img

ಬ್ರೇಕ್ ನಲ್ಲಿ ಸಮಸ್ಯೆ: 3 ಲಕ್ಷಕ್ಕೂ ಹೆಚ್ಚು ಸ್ಕೂಟರ್‌ಗಳನ್ನು ಹಿಂಪಡೆದ ಯಮಹಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗ್ರಾಹಕರ ಸುರಕ್ಷತೆಗೆ ಆದ್ಯತೆ ನೀಡಿರುವ ಇಂಡಿಯಾ ಯಮಹಾ ಮೋಟಾರ್, ತನ್ನ ಜನಪ್ರಿಯ RayZR 125 Fi Hybrid ಮತ್ತು Fascino 125 Fi Hybrid ಸ್ಕೂಟರ್‌ಗಳ 3 ಲಕ್ಷಕ್ಕೂ ಹೆಚ್ಚು ಯೂನಿಟ್‌ಗಳನ್ನು ಸ್ವಯಂಪ್ರೇರಿತವಾಗಿ ಹಿಂಪಡೆಯುವ ನಿರ್ಧಾರ ಕೈಗೊಂಡಿದೆ. ಮುಂಭಾಗದ ಬ್ರೇಕ್ ವ್ಯವಸ್ಥೆಯಲ್ಲಿನ ಸಾಧ್ಯತೆಯ ದೋಷದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಕಂಪನಿಯ ಮಾಹಿತಿ ಪ್ರಕಾರ, ಮೇ 2, 2024 ರಿಂದ ಸೆಪ್ಟೆಂಬರ್ 3, 2025ರ ಅವಧಿಯಲ್ಲಿ ತಯಾರಿಸಲಾದ ಒಟ್ಟು 3,06,635 ಸ್ಕೂಟರ್‌ಗಳು ಈ ಅಭಿಯಾನದ ವ್ಯಾಪ್ತಿಗೆ ಬರುತ್ತವೆ. ಆಂತರಿಕ ತಪಾಸಣೆಯ ವೇಳೆ ಕೆಲವು ವಾಹನಗಳಲ್ಲಿ ಫ್ರಂಟ್ ಬ್ರೇಕ್ ಕ್ಯಾಲಿಪರ್‌ಗೆ ಸಂಬಂಧಿಸಿದ ತಾಂತ್ರಿಕ ಸಮಸ್ಯೆ ಕಂಡುಬಂದಿದ್ದು, ಎಲ್ಲ ಸ್ಕೂಟರ್‌ಗಳಲ್ಲಿ ದೋಷ ಇಲ್ಲದಿದ್ದರೂ ಮುನ್ನೆಚ್ಚರಿಕಾ ಕ್ರಮವಾಗಿ ಹಿಂಪಡೆಯಲಾಗಿದೆ ಎಂದು ಯಮಹಾ ಸ್ಪಷ್ಟಪಡಿಸಿದೆ.

ಈ ರಿಕಾಲ್ ಅಭಿಯಾನದ ಅಡಿಯಲ್ಲಿ, ಸಂಬಂಧಿತ ಭಾಗವನ್ನು ಅಧಿಕೃತ ಯಮಹಾ ಸರ್ವಿಸ್ ಕೇಂದ್ರಗಳಲ್ಲಿ ಯಾವುದೇ ವೆಚ್ಚವಿಲ್ಲದೆ ಬದಲಾಯಿಸಲಾಗುತ್ತದೆ. ಸ್ಕೂಟರ್ ಮಾಲೀಕರು ತಮ್ಮ ವಾಹನ ಈ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಚಾಸಿಸ್ ಸಂಖ್ಯೆಯ ಮೂಲಕ ಪರಿಶೀಲಿಸಬಹುದು.

Must Read