January22, 2026
Thursday, January 22, 2026
spot_img

ಬ್ರೇಕ್‌ಫಾಸ್ಟ್‌ ಮೀಟಿಂಗ್‌ | ಜನರ ಮುಂದೆ ಒಗ್ಗಟ್ಟಿನ ನಾಟಕವಷ್ಟೇ: ಎಚ್‌ಡಿಕೆ ಲೇವಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಕೀಯ ವಲಯದಲ್ಲಿ ಕಳೆದ ಕೆಲವು ದಿನಗಳಿಂದ ಚರ್ಚೆಯಾಗುತ್ತಿದ್ದ ಕಾಂಗ್ರೆಸ್‌ ನಾಯಕತ್ವ ಬದಲಾವಣೆ ಮಾತುಗಳು ತೀವ್ರತೆ ಪಡೆದುಕೊಂಡ ಬೆನ್ನಲ್ಲೇ ಹೈಕಮಾಂಡ್‌ ಸೂಚನೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಲ್ಲಿ ಒಗ್ಗಟ್ಟಿನ ಚಿತ್ರಣ ಹೊರಬಿದ್ದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜಂಟಿಯಾಗಿ ಪತ್ರಿಕಾಗೋಷ್ಠಿ ನಡೆಸಿ, ಯಾವುದೇ ಭಿನ್ನಮತ ಇಲ್ಲ, ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧವಾಗಿ ಕೆಲಸ ಮಾಡುತ್ತೇವೆ ಎಂದು ಸಂದೇಶ ನೀಡಿದ್ದಾರೆ. ಆದರೆ ಈ ಬೆಳವಣಿಗೆಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಹಾಗೂ ಜೆಡಿಎಸ್‌ ನಾಯಕ ಎಚ್‌ಡಿ ಕುಮಾರಸ್ವಾಮಿ, ಇದನ್ನು ರಾಜಕೀಯ “ಡ್ರಾಮಾ” ಎಂದು ಕರೆದಿದ್ದಾರೆ. ಅಧಿಕಾರಕ್ಕಾಗಿ ಸಿಎಂ-ಡಿಸಿಎಂ ನಡುವೆ ಕಚ್ಚಾಟ ನಡೆಯುತ್ತಿದ್ದು, ಜನರ ಮುಂದೆ ಒಗ್ಗಟ್ಟಿನ ನಾಟಕ ಮಾಡುತ್ತಿದ್ದಾರೆ ಎಂದು ಅವರು ಲೇವಡಿ ಮಾಡಿದ್ದಾರೆ.

ಎರಡು ವರ್ಷಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ, ಸರ್ಕಾರವು ಆಡಳಿತಕ್ಕಿಂತಲೂ ಕುರ್ಚಿ ಕಿತ್ತಾಟದಲ್ಲೇ ತೊಡಗಿಸಿಕೊಂಡಿದೆ ಎಂದು ಎಚ್‌ಡಿಕೆ ತೀವ್ರ ವಾಗ್ದಾಳಿ ನಡೆಸಿದರು. ಜಂಟಿ ಉಪಾಹಾರ ಮತ್ತು ಪತ್ರಿಕಾಗೋಷ್ಠಿಯಿಂದ ಒಮ್ಮತ ಸಾಬೀತಾಗುವುದಿಲ್ಲ, ತೆರೆಮರೆಯಲ್ಲಿ ಇನ್ನೂ ಪೈಪೋಟಿ ಮುಂದುವರಿದಿದೆ ಎಂಬುದಾಗಿ ಅವರು ಆರೋಪಿಸಿದರು.

Must Read